ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಾರೋಗ್ಯದಿಂದ ಬಾಡಿದ ಬೈಡನ್: ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಹೀಗಾಗಿ ಅವರು ಕೊಲೊನೋಸ್ಕೋಪಿಗಾಗಿ ಅರಿವಳಿಕೆ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರನ್ನು ನೇಮಿಸಲಾಗಿದೆ ಎಂದು ಶ್ವೇತ ಭವನದಿಂದ ಶುಕ್ರವಾರ ಘೋಷಿಸಲಾಗಿದೆ. "ಉಪಾಧ್ಯಕ್ಷರು ಈ ಸಮಯದಲ್ಲಿ ವೆಸ್ಟ್ ವಿಂಗ್‌ನಲ್ಲಿರುವ ಅವರ ಕಚೇರಿಯಿಂದ ಕೆಲಸ ಮಾಡುತ್ತಾರೆ" ಎಂದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುಎಸ್ ಸಂವಿಧಾನದ ಪ್ರಕಾರ, ಸೆನೆಟ್‌ನ ಅಧ್ಯಕ್ಷ ಪ್ರೊ ಟೆಂಪೋರ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ಅವರಿಗೆ ಅಧ್ಯಕ್ಷ ಬೈಡನ್ ಅವರು ಈ ಬಗ್ಗೆ ತಿಳಿಸಬೇಕಾಗುತ್ತದೆ. ಚಿಕಿತ್ಸೆಗೆ ಒಳಪಡುತ್ತಿದ್ದು, ಅರಿವಳಿಕೆ ಅಡಿಯಲ್ಲಿರುವ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆದು ಅಧಿಕೃತ ಮುದ್ರೆಯೊಂದಿಗೆ ಸಹಿ ಹಾಕಬೇಕಾಗುತ್ತದೆ.

"ಅಧ್ಯಕ್ಷ ಜಾರ್ಜ್ W. ಬುಷ್ ಅವರು 2002 ಮತ್ತು 2007 ರಲ್ಲಿ ಇದೇ ವಿಧಾನವನ್ನು ಅನುಸರಿಸಿದ್ದರು ಮತ್ತು ಸಂವಿಧಾನದಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯನ್ನು ಪಾಲಿಸಿದ್ದರು. ಅಧ್ಯಕ್ಷ ಬೈಡೆನ್ ಅವರು ಅರಿವಳಿಕೆಗೆ ಒಳಗಾದಾಗ ಅಲ್ಪಾವಧಿಗೆ ಉಪಾಧ್ಯಕ್ಷರಿಗೆ ಅಧಿಕಾರವನ್ನು ವರ್ಗಾಯಿಸಲಾಗುತ್ತದೆ ,"

Edited By : Nagaraj Tulugeri
PublicNext

PublicNext

20/11/2021 08:51 am

Cinque Terre

62.94 K

Cinque Terre

2

ಸಂಬಂಧಿತ ಸುದ್ದಿ