ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಳಿತಿಗಾಗಿ ತಂತ್ರಜ್ಞಾನ ಬಳಸಬೇಕಿದೆ: ಬೈಡನ್ ಭೇಟಿ ನಂತರ ಮೋದಿ ಮಾತು

ವಾಷಿಂಗ್​ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶ್ವೇತಭವನದಲ್ಲಿ ಜೋ ಬೈಡನ್ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮನ್ನು ಶ್ವೇತ ಭವನಕ್ಕೆ ಆಹ್ವಾನಿಸಿದ ಜೋ ಬೈಡನ್‌ಗೆ ಧನ್ಯವಾದ ತಿಳಿಸಿದರು. ಮೋದಿ ಮಾತಿಗೆ ಪ್ರತಿಕ್ರಿಯಿಸಿದ ಬೈಡೆನ್, ನಿಮ್ಮ ಬಗ್ಗೆ ಹಲವು ವರ್ಷಗಳಿಂದ ನನಗೆ ಗೊತ್ತಿದೆ. 2014, 2016ರಲ್ಲೂ ನಿಮ್ಮ ಜೊತೆಗೆ ಮಾತುಕತೆ ನಡೆಸಿದ್ದೇನೆ. ಭಾರತ, ಅಮೆರಿಕ ಇತಿಹಾಸದಲ್ಲಿ ಇದು ಹೊಸ ಯುಗ ಎಂದು ಹೇಳಿದರು.

ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ತಂತ್ರಜ್ಞಾನವು ಪ್ರೇರಕ ಶಕ್ತಿಯಾಗುತ್ತಿದೆ. ಜಾಗತಿಕ ಒಳತಿಗಾಗಿ ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳಲು ನಾವು ನಮ್ಮ ಪ್ರತಿಭೆಯನ್ನು ಬಳಸಿಕೊಳ್ಳಬೇಕು. ಬೈಡೆನ್ ಪ್ರಸ್ತಾಪಿಸಿದ ಪ್ರತಿಯೊಂದು ವಿಷಯವೂ ಭಾರತ-ಅಮೆರಿಕ ಬಾಂಧವ್ಯ ವೃದ್ಧಿಯಲ್ಲಿ ನಿರ್ಣಾಯಕವಾದವು. ಕೊವಿಡ್‌ ನಿಯಂತ್ರಣಕ್ಕಾಗಿ ಜೋ ಬೈಡೆನ್ ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನಗಳು ಗಮನಾರ್ಹವಾಗಿವೆ. ಜಾಗತಿಕ ಸವಾಲುಗಳನ್ನು ಪರಿಹರಿಸಲು ಎರಡು ದೇಶಗಳ ಸಂಬಂಧದಿಂದ ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ ಎಂದರು.

Edited By : Nagaraj Tulugeri
PublicNext

PublicNext

25/09/2021 12:17 pm

Cinque Terre

56.26 K

Cinque Terre

0

ಸಂಬಂಧಿತ ಸುದ್ದಿ