ವಾಷಿಂಗ್ಟನ್: ಕ್ವಾಡ್ ನಾಯಕರ ಮೊದಲ ಶೃಂಗಸಭೆಯಲ್ಲಿ ಭಾಗವಹಿಸಲು ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಮಂಗಳವಾರ ಪ್ರಯಾಣ ಬೆಳೆಸಿದ್ದರು. ಪ್ರಧಾನಿ ಮೋದಿ ಇಂದು ಮುಂಜಾನೆ ವಾಷಿಂಗ್ಟನ್ನ ಆಂಡ್ರ್ಯೂಸ್ ಜಂಟಿ ಏರ್‌ಫೋರ್ಸ್ ಬೇಸ್‌ನಲ್ಲಿ ಇಳಿದರು.
ಪ್ರಮಾಣದ ಮಳೆಯಾಗುತ್ತಿದ್ದರೂ ಅದನ್ನು ಲೆಕ್ಕಿಸದ ಅನಿವಾಸಿ ಭಾರತೀಯರು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡು, ರಾಷ್ಟ್ರಧ್ವಜವನ್ನು ಹಿಡಿದು ಪ್ರಧಾನಿ ಮೋದಿ ಅವರನ್ನು ಅಮೆರಿಕಕ್ಕೆ ಸ್ವಾಗತಿಸಿದರು. ಪ್ರಧಾನಿ ಮೋದಿಯನ್ನು ಬಿಡೆನ್ ಆಡಳಿತದ ಹಿರಿಯ ಅಧಿಕಾರಿಗಳು ಮತ್ತು ಅಮೆರಿಕದ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಬರಮಾಡಿಕೊಂಡರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ಸಮುದಾಯದ ಹೃತ್ಪೂರ್ವಕ ಸ್ವಾಗತಕ್ಕಾಗಿ ಧನ್ಯವಾದಗಳು. ನಮ್ಮ ವಲಸಿಗರು ನಮ್ಮ ಶಕ್ತಿ. ಭಾರತೀಯ ವಲಸಿಗರು ಹೇಗೆ ವಿಶ್ವದಾದ್ಯಂತ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂಬುದು ಶ್ಲಾಘನೀಯ" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
PublicNext
23/09/2021 11:04 am