ಲಂಡನ್: ಬ್ರಿಟನ್ ಸಂಸತ್ತಿನಲ್ಲಿ ಕಳೆದ ಗುರುವಾರ ನಡೆದ ಚರ್ಚೆಯೊಂದರಲ್ಲಿ ಸಂಸದೆ ಝಾರಾ ಸುಲ್ತಾನಾ ಕಣ್ಣೀರಿಟ್ಟಿದ್ದಾರೆ. ತಾವು ಎದುರಿಸಿದ ಕಿರುಕುಳಗಳ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಅವರು ಗದ್ಗದಿತರಾಗಿದ್ದಾರೆ.
ಕಾನ್ವೆಂಟ್ರಿ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ ಲೇಬರ್ ಪಕ್ಷದ ಸದಸ್ಯೆ ಝಾರಾ ಸುಲ್ತಾನಾ ತಾವು ತಮ್ಮ ಧರ್ಮದ ಕಾರಣಕ್ಕಾಗಿ ಅನುಭವಿಸಿದ ಮಾನಸಿಕ ಹಿಂಸೆಗಳ ಬಗ್ಗೆ ಮಾತಾಡಿದ್ದಾರೆ.
ಇಸ್ಲಮೋಫೋಬಿಯಾ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಅವರು " ನೀವು ಮುಸ್ಲಿಂ, ನಿಮ್ಮ ಮುಸ್ಲಿಂ ಗುಂಪು ಮಾನವತೆಗೆ ಅಪಾಯಕಾರಿ ಎಂದು ಒಬ್ಬ ನನಗೆ ಸಂದೇಶ ಕಳುಹಿಸಿದ್ದಾನೆ. ನೀವು ಕ್ಯಾನ್ಸರ್ ಇದ್ದಂತೆ. ಶೀಘ್ರದಲ್ಲಿ ಯುರೋಪ್ ನಿಮ್ಮನ್ನು ಹೊರಹಾಕಲಿದೆ. ನೀವು ಉಗ್ರರ ಬಗ್ಗೆ ಅನುಕಂಪ ಹೊಂದಿದ್ದೀರಿ ಎಂದು ಜನ ನನ್ನನ್ನು ಜರಿದಿದ್ದಾರೆ.
ನಾನು ಮುಸ್ಲಿಂ ಮಹಿಳೆಯಾಗಿದ್ದಕ್ಕೆ ನೇರಾನೇರ ನಡೆ ಹೊಂದಿದ್ದಕ್ಕೆ ಹಾಗೂ ಎಡಪಂಥೀಯಳಾಗಿರುವುದಕ್ಕೆ ನನಗೆ ಜನಾಂಗೀಯ ಕಿರುಕುಳ ನೀಡಲಾಗುತ್ತಿದೆ ಮತ್ತು ದ್ವೇಷಕ್ಕೆ ಒಳಗಾಗುತ್ತಿದ್ದೇನೆ ಎಂದು ಝಾರಾ ಸುಲ್ತಾನಾ ಕಣ್ಣೀರಿಟ್ಟಿದ್ದಾರೆ.
PublicNext
11/09/2021 04:05 pm