ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಶೈಲಿಯಲ್ಲಿ ತಾಲಿಬಾನಿಗಳಿಂದ ಸ್ವಚ್ಛತಾ ಅಭಿಯಾನ: ಫೋಟೋ ವೈರಲ್

ಕಾಬೂಲ್: ಬಂದೂಕು ತೋರಿಸಿ ತೀವ್ರ ಹಿಂಸಾಚಾರದ ಮೂಲಕ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್ ಪಡೆ ಈಗ ಅಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ.

ತಾಲಿಬಾನ್ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಹಂಚಿಕೊಂಡಿರುವ "ತಾಲಿಬ್ ಟೈಮ್ಸ್" ಈ ಫೋಟೋ ಶೇರ್ ಮಾಡಿದೆ. ಇದರಲ್ಲಿ, ಕಂದಹಾರ್ ಮೇಯರ್ ಮತ್ತು ಸಾಮಾನ್ಯ ನಾಗರಿಕರು ಬೀದಿಗಳಲ್ಲಿ ಪೊರಕೆಯಿಂದ ಗುಡಿಸಿ ಸ್ವಚ್ಛತೆಯ ಸಂದೇಶವನ್ನು ನೀಡಿದ್ದಾರೆೆಂದು ತಾಲಿಬ್ ಟೈಮ್ಸ್ ವರದಿ ಮಾಡಿದೆ.

ಈ ಹಿಂದೆ ಭಾರತದಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸಿದ್ದ ಪಿಎಂ ಮೋದಿ ಪೊರಕೆ ಹಿಡಿದು ತಾವೇ ಖುದ್ದು ರಸ್ತೆಗಳನ್ನು ಗುಡಿಸಿದ್ದರು. ಸದ್ಯ 2014 ರಲ್ಲಿ ಮೋದಿ ಸ್ವಚ್ಛ ಭಾರತ್ ಮಿಷನ್ ಫೋಟೋ ಜೊತೆ ತಾಲಿಬಾನಿಯರ ಈ ಫೋಟೋ ತಾಳೆ ಹಾಕಿ ಶೇರ್ ಮಾಡಲಾಗುತ್ತಿದೆ.

Edited By : Nagaraj Tulugeri
PublicNext

PublicNext

09/09/2021 05:44 pm

Cinque Terre

66.62 K

Cinque Terre

17