ಕಾಬೂಲ್ : ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರ ಸಂಘಟನೆ ಇಂದು ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಲು ಸಿದ್ದತೆ ನಡೆಸಿದ್ದು, ಈ ನಡುವೆ ಕಾಶ್ಮೀರದ ಪರವಾಗಿ ಭಾರತದ ಮುಸ್ಲಿಮರ ಪರ ಧ್ವನಿ ಎತ್ತುತ್ತೇವೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾನೆ.
ಬಿಬಿಸಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಸುಹೇಲ್ ಶಾಹೀನ್, ಕಾಶ್ಮಿರದ ಮುಸ್ಲಿಮರಿಗಾಗಿ ಧ್ವನಿ ಎತ್ತುತ್ತೇವೆ. ಕಾಶ್ಮೀರ ಸೇರಿದಂತೆ ಎಲ್ಲಿಯಾದರೂ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕು ತನ್ನಬಳಿ ಇದೆ ತಾಲಿಬಾನ್ ಸಂಘಟನೆ ಹೇಳಿದೆ. ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತುವ ನೀತಿಯನ್ನು ತಾಲಿಬಾನ್ ಹೊಂದಿಲ್ಲ ಎಂದು ಅದು ಹೇಳಿದೆ.
ಕಾಶ್ಮೀರ, ಭಾರತ ಮತ್ತು ಇತರ ಯಾವುದೇ ದೇಶದ ಮುಸ್ಲಿಮರ ಪರವಾಗಿ ಧ್ವನಿ ಎತ್ತಲು ಮುಸ್ಲಿಮರಾಗಿರುವುದರಿಂದ ನಮಗೆ ಈ ಹಕ್ಕಿದೆ ಎಂದು ಸುಹೇಲ್ ಶಾಹೀನ್ ಹೇಳಿದ್ದಾನೆ.
PublicNext
03/09/2021 01:27 pm