ಬೆಂಗಳೂರು: ರಾಜ್ಯದಲ್ಲಿರುವ ಅಪ್ಘಾನಿಸ್ತಾನ ಮೂಲದ ವಿದ್ಯಾರ್ಥಿಗಳೊಂದಿಗೆ ನಾವಿದ್ದೇವೆ. ಅವರು ತಮ್ಮ ಪೋಷಕರ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಪ್ರತಿನಿಧಿಗಳು ಬಂದು ನನ್ನ ಭೇಟಿ ಮಾಡಿದ್ದು, ಅಲ್ಲಿನ ಘಟನೆಯಿಂದ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ನಮ್ಮ ರಾಜ್ಯದಲ್ಲಿ ನಾವು ಅವರಿಗೆ ಧೈರ್ಯ ತುಂಬಬೇಕು. ಅವರ ದೇಹ ಮಾತ್ರ ಇಲ್ಲಿದ್ದು, ಅವರ ಮನಸ್ಸು ಅಲ್ಲಿರುವ ಪೋಷಕರ ಬಗ್ಗೆ ಆತಂಕಪಡುತ್ತಿದೆ.
PublicNext
23/08/2021 10:49 pm