ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತಕ್ಕೆ ಬರುತ್ತಲೇ ಮೊಳಗಿತು 'ಭಾರತ್ ಮಾತಾ ಕಿ ಜೈ' ಘೋಷಣೆ

ನವದೆಹಲಿ: ಬಿಕ್ಕಟ್ಟಿನಿಂದ ಬಳಲುತ್ತಿರುವ ಆಫ್ಘನ್ ರಾಜಧಾನಿ ಕಾಬೂಲ್ ನಿಂದ ಸುಮಾರು 90 ಜನರನ್ನು ಹೊತ್ತ ಏರ್ ಇಂಡಿಯಾ ವಿಮಾನವು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪರ್ಶಿಸುತ್ತಿದ್ದಂತೆ ಸಂತೋಷದ ದೃಶ್ಯಗಳು ಕಂಡು ಬಂದಿದೆ. ಭಾರತ ಸರ್ಕಾರ ಕಳುಹಿಸಿದ ವಿಶೇಷ ವಿಮಾನದಲ್ಲಿ ಭಾನುವಾರ ಮುಂಜಾನೆ ಕನಿಷ್ಠ 87 ಭಾರತೀಯರು ಮತ್ತು ಇಬ್ಬರು ನೇಪಾಳ ಪ್ರಜೆಗಳನ್ನು ಆಫ್ಘಾನಿಸ್ತಾನದಿಂದ ಸ್ಥಳಾಂತರಿಸಲಾಯಿತು.

ವಿಮಾನವು ನವದೆಹಲಿಗೆ ಬಂದಿಳಿದ ನಂತರ, ಯುದ್ಧಪೀಡಿತ ದೇಶದಿಂದ ತಮ್ಮ ತಾಯ್ನಾಡನ್ನು ತಲುಪಿದ ಸಂತೋಷವನ್ನು ವ್ಯಕ್ತಪಡಿಸಲು ಉತ್ಸಾಹದಿಂದ ಸ್ಥಳಾಂತರಗೊಂಡವರು ‘ಭಾರತ್ ಮಾತಾ ಕಿ ಜೈ’ ಎಂದು ಒಕ್ಕೊರಲಿನಿಂದ ಜಪಿಸಿದರು.

Edited By : Nagaraj Tulugeri
PublicNext

PublicNext

22/08/2021 12:41 pm

Cinque Terre

95.13 K

Cinque Terre

20

ಸಂಬಂಧಿತ ಸುದ್ದಿ