ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ತಾಲಿಬಾನ್ ಉಗ್ರರಿಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ರೀ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ತಮ್ಮ ವಿಜಯೋತ್ಸವ ಆಚರಿಸುತ್ತಿರುವುದಾಗಿದೆ. ಗನ್ ಹಿಡಿದು ಸೆಲೆಬ್ರೇಟ್ ಮಾಡುತ್ತಿರುವ ಇಬ್ಬರು ಉಗ್ರರು, ಮಲಿಯಾಳಂ ಭಾಷೆ ಮಾತನಾಡ್ತಿರೋದು ಕಂಡು ಬಂದಿದೆ.
'ಇಲ್ಲಿ ಕನಿಷ್ಠ ಇಬ್ಬರು ಮಲಯಾಳಿ ತಾಲಿಬಾನ್‌ಗಳಿರುವಂತೆ ತೋರುತ್ತದೆ. ಒಬ್ಬ 8 ಸೆಕೆಂಡ್‌ಗಳ ಕಾಲ "ಸಂಸಾರಿಕೆಟ್ಟೆ" ಎಂದು ಹೇಳುತ್ತಾನೆ ಮತ್ತು ಇನ್ನೊಬ್ಬ ಅವನನ್ನು ಅರ್ಥಮಾಡಿಕೊಳ್ತಾನೆ' ಎಂದು ಶಶಿತರೂರ್ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
ಶಶಿತರೂರ್ ಅವರು ರೀ ಟ್ವೀಟ್ ಮಾಡಿರುವ ವಿಡಿಯೋ ಆಗಸ್ಟ್ 15 ರಂದು ಟ್ವೀಟ್ ಮಾಡಲಾಗಿದೆ. ಬಹುಶಃ ತಾಲಿಬಾನಿಗಳು ಕಾಬೂಲ್ಗೆ ರೀಚ್ ಆದ ಸಂದರ್ಭದಲ್ಲಿ ಉಗ್ರರು ಸೆಲೆಬ್ರೇಟ್ ಮಾಡಿದ್ದಾರೆ ಅಂತಾ ಹೇಳಲಾಗಿದೆ.
PublicNext
17/08/2021 05:47 pm