ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಡೊನಾಲ್ಟ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಹೀಗಾಗಿ ಅಮೆರಿಕದ ಸಂಸತ್ ಸಭೆಯ (ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್) ಸ್ಪೀಕರ್ ನ್ಯಾನ್ಸಿ ಪೆಲೋಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ನ್ಯಾನ್ಸಿ ಪೆಲೋಸಿ, ''ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಜೋ ಬೈಡೆನ್ ಬಹುಮತದೊಂದಿಗೆ ವಿಜಯ ಸಾಧಿಸಿದ್ದಾರೆ. ಅವರು ಸಂವಿಧಾನದ ಆದೇಶದಂತೆ ಜ.20ರಂದು ಅಧಿಕಾರ ಸ್ವೀಕರಿಸಬೇಕಿದೆ. ಆದರೆ ಇನ್ನೂ ಅಧ್ಯಕ್ಷ ಸ್ಥಾನದಲ್ಲಿರುವ ಟ್ರಂಪ್ ಅವರು ರಾಜೀನಾಮೆ ನೀಡಿಲ್ಲ'' ಎಂದು ಎಚ್ಚರಿಸಿದ್ದಾರೆ.
''ಈ ಬೆಳವಣಿಗೆಯ ಮಧ್ಯೆ ಸಂಸತ್ ಭವನದ ಮೇಲೆ ಟ್ರಂಪ್ ಅನುಯಾಯಿಗಳು ಮುತ್ತಿಗೆ ಹಾಕಲಾರಂಭಿಸಿದ್ದಾರೆ. ಹೀಗಾಗಿ ತಕ್ಷಣವೇ ಡೋನಾಲ್ಡ್ ಟ್ರಂಪ್ ಅವರು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ತಮ್ಮ ಅನುಯಾಯಿಗಳಿಗೆ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಪ್ರಚೋದಿಸಿದ್ದಾರೆ ಎನ್ನುವ ಆರೋಪದ ಮೇಲೆ ಅವರನ್ನು ಪದಚ್ಯುತಿ ಮಾಡಲಾಗುವುದು'' ಎಂದು ತಿಳಿಸಿದ್ದಾರೆ.
PublicNext
09/01/2021 05:21 pm