ವಾಷಿಂಗ್ ಟನ್ : ಅಮೆರಿಕಾದಲ್ಲಿ ಟ್ರಂಪ್ ಬೆಂಬಲಿಗರಿಂದ ಅಲ್ಲೊಲ ಕಲ್ಲೊಲ ವಾಗುತ್ತಿದೆ.
ಕ್ಯಾಪಿಟಲ್ ಬಿಲ್ಡಿಂಗ್ ಗೆ ಮುತ್ತಿಗೆ ಹಾಕಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದ ಘಟನೆಯನ್ನು, ಚುನಾಯಿತ ಅಧ್ಯಕ್ಷ ಜೋ ಬೈಡನ್ ಖಂಡಿಸಿ ಇದು ಅಮೆರಿಕಾದ ಕರಾಳ ದಿನ ಎಂದು ಅವರು ಕರೆದಿದ್ದಾರೆ.
ಘರ್ಷಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೋ ಬೈಡನ್, ಅಮೆರಿಕಾದ ಜನರಂತೆಯೇ ಇಡೀ ವಿಶ್ವವೇ ಇದನ್ನು ನೋಡುತ್ತಿದೆ.
ಈ ಘಟನೆ ನನಗೆ ಶಾಕ್ ನೀಡಿದ್ದು, ಬೇಸರ ತಂದಿದೆ.
ನಮ್ಮ ಪ್ರಜಾಪ್ರಭುತ್ವದಲ್ಲಿ ಹಿಂದೆಂದೂ ಕಂಡಿರದ ದಾಳಿಯಾಗಿದೆ. ಪ್ರಜಾಪ್ರಭುತ್ವದ ಭರವಸೆಯ ಬೆಳಕಾಗಿದ್ದ ವ್ಯವಸ್ಥೆಯಲ್ಲಿ ಕತ್ತಲು ಆವರಿಸಿದೆ.
ಯುದ್ಧ ಮತ್ತು ಕಲಹಗಳನ್ನು ಅಮೆರಿಕಾ ಹೆಚ್ಚು ಸಹಿಸಿಕೊಂಡಿದೆ. ನಾವು ಇದನ್ನೂ ಸಹಿಸಿಕೊಳ್ಳುತ್ತೇವೆ ಮತ್ತು ಮೇಲುಗೈ ಸಾಧಿಸುತ್ತೇವೆ ಎಂದಿದ್ದಾರೆ.
ಜನಪ್ರತಿನಿಧಿಗಳು ಕ್ಯಾಪಿಟಲ್ ಬಿಲ್ಡಿಂಗ್ ನಲ್ಲಿ ಸಭೆ ಸೇರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವನ್ನ ದೃಢೀಕರಿಸುವ ಪ್ರಕ್ರಿಯೆ ನಡೆಯುತ್ತಿತ್ತು.
ಈ ವೇಳೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬ್ಯಾರಿಕೇಡ್ ಗಳನ್ನ ತಳ್ಳಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಕ್ಯಾಪಿಟಲ್ ಬಿಲ್ಡಿಂಗ್ ಗೆ ನುಗ್ಗಿದ್ದಾರೆ.
ಆಗ ಪೊಲೀಸರು-ಟ್ರಂಪ್ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ.
ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಇದೇ ವೇಳೆ ಗುಂಡು ತಗುಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
PublicNext
07/01/2021 12:43 pm