ವಾಷಿಂಗ್ ಟನ್ : ಅಧ್ಯಕ್ಷೀಯ ಅಧಿಕಾರ ಹಸ್ತಾಂತರಕ್ಕೆ ದಿನಗಣನೆ ಆರಂಭವಾಗಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸಕ್ತ ವಿಜಯಿತ ಜೋ ಬೈಡನ್ ಗೆ ಅಧಿಕಾರ ವಹಿಸುವುದಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ.
ಈ ಪ್ರಕ್ರಿಯೆಯ ಬೆನ್ನಲ್ಲೆ ಮಾಜಿ ಅಧ್ಯಕ್ಷರ ಬೆಂಬಲಿಗರಿಂದ ದೇಶದಲ್ಲಿ ಕೋಲಾಹಲ ಸೃಷ್ಠಿಯಾಗಿದೆ.
ಹೌದು ಟ್ರಂಪ್ ಬೆಂಬಲಿಗರು ಹಾಗೂ ಪೊಲೀಸರ ನಡುವೆ ವಾಷಿಂಗ್ ಟನ್ ನಲ್ಲಿ ಘರ್ಷಣೆ ಉಂಟಾಗಿದೆ.
ಜೋ ಬೈಡನ್ ಅಧಿಕಾರ ಸ್ವೀಕಾರಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಜಂಟಿ ಅಧಿವೇಶನದಲ್ಲಿ ಚುನಾವಣೆಯ ಫಲಿತಾಂಶವನ್ನು ದೃಢೀಕರಿಸುವ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ವಾಷಿಂಗ್ ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಬಿಲ್ಡಿಂಗ್ ನಲ್ಲಿ ಪೊಲೀಸರು-ಟ್ರಂಪ್ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ.
ಘರ್ಷಣೆ ನಡೆದ ಪ್ರದೇಶದ ಪಕ್ಕದಲ್ಲೇ ಇರುವ ಅಮೆರಿಕ ಕಾಂಗ್ರೆಸ್ಸಿನ ಕಚೇರಿಯ ಕಟ್ಟಡಗಳನ್ನು ಸ್ಥಳಾಂತರವಾಗುತ್ತಿದ್ದು, ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ.
PublicNext
07/01/2021 07:55 am