ಟ್ರಂಪ್ ಟ್ವಿಟ್ಟರ್ ಖಾತೆ ಲಾಕ್ ಈ ನಡುವೆ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ 12 ಗಂಟೆಗಳ ಕಾಲ ಲಾಕ್ ಮಾಡಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ತೀವ್ರ ಘರ್ಷಣೆಗೆ ಎಡೆಮಾಡಿಕೊಡುವ ಸಾಧ್ಯತೆ ಇದೆ.
ಅಧಿಕಾರ ತ್ಯಜಿಸಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೂ ಡೊನಾಲ್ಡ್ ಟ್ರಂಪ್ ಸೋಲೊಪ್ಪಿಕೊಳ್ಳಲು ಸಿದ್ಧರಾಗಿಲ್ಲ.
ಈ ನಡುವೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬುಧವಾರ ಪ್ರತಿಭಟನೆ ಆರಂಭಿಸಿದ್ದು, ಕೋಲಾಹಲ ಸೃಷ್ಟಿಯಾಗಿದೆ.
ಈ ಪ್ರತಿಭಟನೆ ಕುರಿತು ಟ್ರಂಪ್ ಅನೇಕ ಟ್ವೀಟ್ ಗಳನ್ನು ಮಾಡಿದ್ದರು.
ಅವುಗಳನ್ನು ಟ್ವಿಟ್ಟರ್ ಸಂಸ್ಥೆ ಅಳಿಸಿ ಹಾಕಿದೆ. ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುವಂತಹ ಟ್ವೀಟ್ ಗಳನ್ನು ಪದೇ ಪದೇ ಮಾಡಿದ್ದಕ್ಕಾಗಿ ಟ್ರಂಪ್ ಅವರ ಖಾತೆಯನ್ನು 12 ಗಂಟೆ ಬಳಕೆ ಮಾಡಲಾಗದಂತೆ ತಡೆದಿದೆ.
ಟ್ರಂಪ್ ತಮ್ಮ ಟ್ವಿಟರ್ ಮೂಲಕ 88 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳಿಗೆ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುವುದವುದನ್ನು ಟ್ವಿಟರ್ ಕಂಪನಿ ತಡೆದಿದೆ.
ಹಿಂಸಾತ್ಮಕ ಬೆದರಿಕೆಗಳು ಮತ್ತು ಚುನಾವಣಾ ತಪ್ಪು ಮಾಹಿತಿಯ ವಿರುದ್ಧ ಟ್ವಿಟ್ಟರ್ ನೀತಿಗಳನ್ನು ಉಲ್ಲಂಘಿಸುತ್ತಿದ್ದರೆ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಬಂದ್ ಮಾಡಲಾಗುತ್ತದೆ ಎಂದು ಟ್ವಿಟರ್ ಕಂಪನಿ ತಿಳಿಸಿದೆ.
PublicNext
07/01/2021 07:26 am