ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಲ್ಲದ ಚೀನಾ ಪುಂಡಾಟ: 'ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆಗೆ ಸಿದ್ಧರಾಗಿರಿ'- ಪಿಎಲ್‌ಎಗೆ ಕ್ಸಿ ಆದೇಶ

ಬೀಜಿಂಗ್: ಗಡಿಯಲ್ಲಿ ಕಳೆದ ಬೇಸಿಗೆಯಿಂದ ನಿರಂತರ ಕಿರಿಕಿರಿ ಮಾಡುತ್ತಿರುವ ಚೀನಾ ಈಗ ಪೂರ್ವ ಲಡಾಖ್ ಗಡಿ ವಾಸ್ತವ ರೇಖೆಯಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, 'ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿ' ಎಂದು ಪೀಪಲ್ಸ್ ಲಿಬರೇಶನ್ ಆರ್ಮಿಗೆ ಖಡಕ್ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಪಿಎಲ್‌ಎ ಪೂರ್ಣ ಪ್ರಮಾಣದ ಯುದ್ಧ ಸನ್ನದ್ಧತೆಯಲ್ಲಿ ಇರಬೇಕು. ಸೈನ್ಯದ ಸಾಮರ್ಥ್ಯಗಳನ್ನು ಹೆಚ್ಚಳವಾಗಿಸಲು ಮುಂಚೂಣಿಯ ಸಂಘರ್ಷವನ್ನು ಬಳಸಬೇಕು ಮತ್ತು ತರಬೇತಿ ಕಾರ್ಯಾಗಾರಗಳಿಗೆ ತಂತ್ರಜ್ಞಾನವನ್ನು ಸಂಯೋಜಿಸುವ ಅಗತ್ಯವಿದೆ ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ ಎನ್ನಲಾಗಿದೆ.

ಜುಲೈ 1ರಂದು ಪಿಎಲ್‌ಎ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಮಿಲಿಟರಿ ಶಕ್ತಿಯಾಗಿ ಪಕ್ಷ ಸ್ಥಾಪನೆಯಾದ 100ನೇ ವರ್ಷಾಚರಣೆಯನ್ನು ಅತ್ಯುತ್ತಮ ಕಾರ್ಯಕ್ರಮದೊಡನೆ ಗುರುತಿಸಲು ಸಿಎಂಸಿ ಮತ್ತು ಸಿಪಿಸಿಯ ಆದೇಶಗಳನ್ನು ದೃಢ ನಿಶ್ಚಯದಿಂದ ಜಾರಿಗೊಳಿಸಬೇಕು ಎಂದು ಕ್ಸಿ ಜಿನ್‌ಪಿಂಗ್ ಆದೇಶ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Edited By : Vijay Kumar
PublicNext

PublicNext

05/01/2021 05:05 pm

Cinque Terre

92.23 K

Cinque Terre

5

ಸಂಬಂಧಿತ ಸುದ್ದಿ