ಬೀಜಿಂಗ್: ಚೀನಾದ ಅಧ್ಯಕ್ಷ ಷೀ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೇ? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಟ್ವಿಟ್ಟರ್ ಸೇರಿದಂತೆ ಹಲವೆಡೆ ಹರಿದಾಡುತ್ತಿದೆ. ಕಳೆದ 2 ವರ್ಷಗಳಿಂದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬೀಜಿಂಗ್‌ನಲ್ಲಿರುವ ತಮ್ಮ ಮನೆಯಿಂದ ಹೊರಬಂದಿಲ್ಲ ಮತ್ತು ಯಾವುದೇ ಜಾಗತಿಕ ನಾಯಕರನ್ನು ಭೇಟಿಯಾಗಲಿಲ್ಲ. ಹಾಗೇ, ಯಾವುದೇ ಪ್ರಮುಖ ಸಿಸಿಪಿ ನಾಯಕರನ್ನು ಕೂಡ ಭೇಟಿಯಾಗಿಲ್ಲ ಎನ್ನಲಾಗುತ್ತಿದೆ.
ಇತ್ತೀಚ್ಚೆಗೆ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಗಾಗಿ ಅವರು ಉಜ್ಬೇಕಿಸ್ತಾನದ ಸಮರ್‌ಕಂಡ್‌ಗೆ ತೆರಳಿದ್ದರು. ಈ ವೇಳೆ ಅವರನ್ನು ಆರ್ಮಿ ಮಖ್ಯಸ್ಥ ಹುದ್ದೆಯಿಂದ ತೆಗೆಹಾಕಲಾಗಿದೆ ಎಂದು ಹೇಳಲಾಗಿದೆ. ಈವರೆಗೂ ಚೀನಾದ ಕಮ್ಯುನಿಷ್ಟ್ ಪಾರ್ಟಿಯಾಗಲಿ, ಚೀನಾದ ಮುಖವಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯಾಗಲು ಈ ವದಂತಿಯನ್ನು ನಿರಾಕರಣೆ ಮಾಡಿಲ್ಲ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಕ್ಸಿ ಜಿನ್‌ಪಿಂಗ್‌ಎನ್ನುವ ಹ್ಯಾಶ್‌ಟ್ಯಾಗ್ ಅನ್ನು ಸಾವಿರಾರು ಸಂಖ್ಯೆಯಲ್ಲಿ ಟ್ವೀಟ್ ಮಾಡಲಾಗುತ್ತಿದೆ. ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಈ ಕುರಿತಾಗಿ ಟ್ವೀಟ್ ಮಾಡಿದ ಬಳಿಕ, ಬಹುಶಃ ಈ ಪ್ರಶ್ನೆ ಇನ್ನಷ್ಟು ವೇಗವಾಗಿ ಏರುತ್ತಿದೆ.
ಕ್ಸಿ ಜಿನ್‌ಪಿಂಗ್ ಅವರನ್ನು ಬೀಜಿಂಗ್‌ನಲ್ಲಿ ಗೃಹಬಂಧನಲ್ಲಿ ಇರಿಸಲಿದ್ದಾರೆ ಎನ್ನುವ ವದಂತಿಯನ್ನು ಅಮೂಲಾಗ್ರವಾಗಿ ತನಿಖೆ ಮಾಡುವ ಅಗತ್ಯ ಹೆಚ್ಚಾಗಿ ಕಾಣುತ್ತಿದೆ. ಬಹುಶಃ ಈ ಸುದ್ದಿ ನಿಜವಾಗಿರುವ ಸಾಧ್ಯತೆ ಇದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
"ಚೀನಾ ಕುರಿತು ಹೊಸ ವದಂತಿ ಇದೆ, ಅದನ್ನು ತನಿಖೆ ಮಾಡಲಾಗುತ್ತದೆ. ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದಾರೆಯೇ? ಜಿನ್‌ಪಿಂಗ್ ಇತ್ತೀಚೆಗೆ ಸಮರ್‌ಕಂಡ್‌ನಲ್ಲಿದ್ದಾಗ, ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕರು ಸೇನಾ ಮುಖ್ಯಸ್ಥ ಹುದ್ದೆಯಿಂದ ಅವರನ್ನು ತೆಗೆದು ಹಾಕಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿದೆ. ಆ ನಂತರ ಅವರು ಗೃಹಬಂಧನದಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜೊತೆಗೆ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ.
ಕಿಯಾಮಿಂಗ್ ನೂತನ ಅಧ್ಯಕ್ಷ?: ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಚೀನಾದ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಇದಲ್ಲದೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅಧ್ಯಕ್ಷ ಸ್ಥಾನದಿಂದ ಕ್ಸಿ ಜಿನ್‌ಪಿಂಗ್ ಅವರನ್ನು ಕೆಳಗಿಳಿಸಿ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಇದೀಗ ಚೀನಾ ಅಧ್ಯಕ್ಷ ಲಿ ಕಿಯಾಮಿಂಗ್ ಚೀನಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಚೀನಾದ ಪಿಎಲ್‌ಎ ಆರ್ಮಿ ಜನರಲ್ ಲೀ ಕಿಯಾಮಿಂಗ್ ಚೀನಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈವರೆಗೂ ಈ ಸುದ್ದಿಯನ್ನು ದೃಢೀಕರಿಸಲಾಗಿಲ್ಲ. ಇಂಟರ್‌ನ್ಯಾಶನಲ್ ಡೆಸ್ಕ್‌ನ ಪತ್ರಕರ್ತರು ಕೂಡ ಚೀನಾದಲ್ಲಿ ಇಂಥ ವಿಚಾರಗಳು ಬಹುಶಃ ಚರ್ಚೆಯಲ್ಲಿರಬಹುದು. ಆಗಿರುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಚೀನಾದ ಬಗ್ಗೆ ಸುದ್ದಿ ನೀಡುವ ಗ್ಲೋಬಲ್ ಟೈಮ್ಸ್, ಸಿಎನ್‌ಎನ್ ಅಥವಾ ಬಿಬಿಸಿಯಂತಹ ಚಾನೆಲ್‌ಗಳು ಸಹ ಇದನ್ನು ಖಚಿತಪಡಿಸಿಲ್ಲ.
ಅಂತಹ ಪರಿಸ್ಥಿತಿಯಲ್ಲಿ, ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿಲ್ಲ ಮತ್ತು ಚೀನಾದಲ್ಲಿ ಯಾವುದೇ ದಂಗೆ ನಡೆದಿಲ್ಲ ಎಂಬುದು ಇಲ್ಲಿಯವರೆಗಿನ ಸತ್ಯ ಎಂದು ನಂಬಲಾಗಿದೆ. ಶಾಂಘೈ ಸಹಕಾರ ಶೃಂಗಕ್ಕಾಗಿ ಉಜ್ಬೇಕಿಸ್ತಾನ ತೆರಳಿದ ಮೋದಿ, ಕ್ಸಿ ಜತೆ ಮಾತುಕತೆ ಇಲ್ಲ
ವಿರೋಧಿಗಳ ಸಂಚು, ಈ ವಾರ ಚೀನಾದಲ್ಲಿ, ಇಬ್ಬರು ಮಾಜಿ ಮಂತ್ರಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಮತ್ತು ನಾಲ್ಕು ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅವರು 'ರಾಜಕೀಯ ಬಣ'ದ ಭಾಗವಾಗಿದ್ದರು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕಮ್ಯುನಿಸ್ಟ್ ಪಕ್ಷದ ಭ್ರಷ್ಟಾಚಾರ ವಿರೋಧಿ ಅಭಿಯಾನ ನಡೆಯುತ್ತಿದೆ.
ಈ ಅಧಿಕಾರಿಗಳು ಮತ್ತು ಮಾಜಿ ಸಚಿವರು ಜಿನ್‌ಪಿಂಗ್ ಅವರ ವಿರೋಧಿಗಳು ಎಂದು ನಂಬಲಾಗಿದೆ. ಜಿನ್‌ಪಿಂಗ್ ವಿರೋಧಿ ಶಿಬಿರದಿಂದ ಈ ವದಂತಿಯನ್ನು ಹರಡಲಾಗಿರಬಹುದು ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.
PublicNext
24/09/2022 06:40 pm