ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ ; ಕೇಶವ ನಾಡಕರ್ಣಿ
ರಾಜ್ಯದ ಹಿಜಾಬ್ ವಿವಾದದಲ್ಲಿ ಈಗ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಅಲ್ ಖೈದಾ ಎಂಟ್ರಿಯಾಗಿದೆ.
ಹಿಜಾಬ್ ಪರ ಹೋರಾಟ ಕೂಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರ ಕೇಂದ್ರ ಬಿಂದುವಾಗಿದ್ದ ಮಂಡ್ಯದ ಮುಸ್ಕಾನ್ ಖಾನ್ ಎಂಬ ವಿದ್ಯಾರ್ಥಿನಿ ಬೆಳಗಾಗುವುದರಲ್ಲಿ ಮುಸ್ಲಿಂ ಸಮುದಾಯದ ಮನೆ ಮಾತಾಗಿದ್ದಳು.
ಅಲ್ಲಾಹು ಅಕ್ಬರ್ ಘೋಷಣೆ ಕೂಗಿ, ತನ್ನ ಧರ್ಮದ ಮೇಲಿದ್ದ ಅಭಿಮಾನ ಮರೆದಿದ್ದ ಮುಸ್ಕಾನ್ಗೆ ಮುಸ್ಲಿಂ ಮುಖಂಡರಿಂದ ಶಹಬ್ಬಾಸ್ ಗಿರಿ ದೊರೆತಾಗ ಆಕೆ ಹಾಗೂ ಆಕೆಯ ಕುಟುಂಬದವರು ಪುಳಕಿತರಾಗಿದ್ದು ಸಹಜ. ಆದರೆ ಈಗ ಜಾಗತಿಕ ಉಗ್ರನೊಬ್ಬ ಆಕೆಯನ್ನು ಹಾಡಿ ಹೊಗಳಿದ್ದು ಆತಂಕ ಸೃಷ್ಟಿಸಿದೆ.
ಇಲಿಯಂತೆ ಅಫಘಾನಿಸ್ತಾನದ ಗುಹೆಯಲ್ಲಿ ಅಡಿಗಿ ಕುಳಿತಿರುವ ಜಾಗತಿಕ ಭಯೋತ್ಪಾದಕ ಅಲ್ ಖೈದಾ ನಾಯಕ ಅಯ್ಮಾನ್ ಅಲ್ ಜವಾಹಿರಿಗೆ ಆಕೆಯ ರೋಷಾವೇಶದ ಕೂಗು ತಲುಪಿದ್ದು ಆಶ್ಚರ್ಯ.
ಹಿಜಾಬ್ ವಿವಾದ ಗಂಭೀರ ಸ್ವರೂಪ ತಾಳ ತೊಡಗಿದಾಲೇ ರಾಜ್ಯದಲ್ಲಿರುವ ಯಾವುದೋ ಒಂದು ದೇಶದ್ರೋಹಿ ಸಂಘಟನೆ ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುತ್ತಿದೆ ಎಂದು ಭಾಸವಾಗಿತ್ತು. ಅದೇ ಸಂಘಟನೆ ವ್ಯವಸ್ಥಿತವಾಗಿ ಉಗ್ರನಿಗೆ ಮಾಹಿತಿ ತಲುಪಿಸಿರುವ ಸಾಧ್ಯತೆಗಳಿವೆ. ಇದೊಂದು ಅಂತಾರಾಷ್ಟ್ರೀಯ ಸಂಚು ಎಂದರೂ ತಪ್ಪಾಗಲಾರದು.
ಸತ್ತೇ ಹೋಗಿದ್ದಾನೆ ಎಂದು ಭಾವಿಸಿದ್ದ ಅಲ್ ಖೈದಾ ನಾಯಕ ಅಯ್ಮಾನ್ ಅಲ್ ಜವಾಹಿರಿ " ಭಾರತೀಯ ಮುಸ್ಲಿಂರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ'' ಎಂದು ವಾಗ್ದಾಳಿ ನಡೆಸಿ, ದಿ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಬರೆಯಲಾದ ಪೋಸ್ಟರ್ ನ ಶೀರ್ಷಿಕೆಯಿರುವ ವೀಡಿಯೋದಲ್ಲಿ ಮುಸ್ಕಾನ್ ಳನ್ನು ಹಾಡಿ ಹೊಗಳಿದ್ದಾನೆ.
ಒಂಬತ್ತು ನಿಮಿಷಗಳ ವೀಡಿಯೋ ಹೇಳಿಕೆಯಲ್ಲಿ ಮುಸ್ಕಾನ್ ಖಾನ್ ಳ ಸಾಹಸ ಹೊಗಳಿದ್ದಾನೆ. ಮುಸ್ಕಾನ್ ಖಾನ್ ಬುರ್ಖಾ ಧರಿಸುವವರನ್ನು ವಿರೋಧಿಸುವವರ ವಿರುದ್ಧವೇ ಅಲ್ಲಾಹು ಅಕ್ಬರ್ ಎಂದು ಕೂಗುವ ಮೂಲಕ ಅವರ ಜೈ ಶ್ರೀರಾಮ್ ಘೋಷಣೆಯನ್ನು ವಿರೋಧಿಸಿದ್ದಾಳೆ ಎಂದು ಶ್ಲಾಘಿಸಿದ್ದಾನೆ.
ತನ್ನ ಧರ್ಮದ ಮೇಲಿನ ಅವಳ ನಂಬಿಕೆ ಅಭಿಮಾನ ಪ್ರಶ್ನಾತೀತ. ಆದರೆ ಕರ್ನಾಟಕದ ಹಿಜಾಬ್ ವಿವಾದ ಜಾಗತಿಕ ಉಗ್ರನಿಗೆ ತಲುಪಿದ್ದು ಹೇಗೆ? ತಲುಪಿಸಿದ ದೇಶದ್ರೋಹಿಗಳು ಯಾರು? ಎಂಬುದನ್ನು ಕೇಂದ್ರ ಸರಕಾರ ತನಿಖೆ ನಡೆಸಲೇ ಬೇಕಾಗಿದೆ.
ಆರಂಭದಿಂದಲೂ ಹಿಜಾಬ್ ಹೋರಾಟವನ್ನು ಬೆಂಬಲಿಸುತ್ತ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಮುಜುಗರವಾಗಿದ್ದಂತೂ ಸತ್ಯ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ " ಇದೆಲ್ಲ ಬಿಜೆಪಿ, ಸಂಘ ಪರಿವಾರದ ಸೃಷ್ಟಿ'' ಎಂದಿನಂತೆ ಉಡಾಫೆ ಮಾತನಾಡಿದ್ದಾರೆ.
ವಿದ್ಯಾರ್ಥಿನಿ ಮುಸ್ಕಾನ್ ತಂದೆ ಉಗ್ರನ ಹೊಗಳಿಕೆಯನ್ನು ತಿರಸ್ಕರಿಸಿ ನಮಗೆ ಇದ್ಯಾವುದೂ ಬೇಕಿಲ್ಲ, ನಮ್ಮ ಮಕ್ಕಳ ಶಿಕ್ಷಣ ಹಾಗೂ ಹಾಗೂ ಅವರ ಭವಿಷ್ಯ ಮುಖ್ಯ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದಿದ್ದಾರೆ. ಮುಸ್ಕಾನ್ ಜೈನಾಬ್ ತನ್ನ ತಂದೆಯ ಮೂಲಕ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯಾದ ಪಿಎಫ್ಐಗೆ ಸಂಪರ್ಕ ಹೊಂದಿದ್ದಾಳೆ ಎಂಬುದು ಈಗ ಮಹತ್ವ ಪಡೆದಿದೆ.
ಇನ್ನಾದರೂ ನಮ್ಮ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಕ್ಷ ಭೇದ ಮರೆತು ಉಗ್ರಸಂಘಟನೆ ಪ್ರವೇಶವನ್ನು ಖಂಡಸಬೇಕು. ಇಲ್ಲವಾದರೆ ಮುಂದೊಂದು ದಿನ ಎಲ್ಲರೂ ಪಶ್ಚಾತಾಪ ಪಡಬೇಕಾದೀತು.
PublicNext
07/04/2022 05:59 pm