ನ್ಯೂಜಿಲೆಂಡ್ ಸಂಸತ್ ಗೆ ಆಯ್ಕೆಯಾಗಿರುವ ಭಾರತೀಯ ಮೂಲದ ವೈದ್ಯ ಗೌರವ್ ಶರ್ಮಾ ಸಂಸ್ಕೃತ ದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
33 ವರ್ಷದ ಡಾ. ಗೌರವ್ ಶರ್ಮಾ ಹಿಮಾಚಲಪ್ರದೇಶದ ಹಮೀರ್ ಪುರದವರು. ಇವರು ಲೇಬರರ್ ಪಾರ್ಟಿ ಅಭ್ಯರ್ಥಿಯಾಗಿ ಹಮಿಲ್ಟನ್ ವೆಸ್ಟ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ನ್ಯೂಝಿಲೆಂಡ್ ಪಾರ್ಲಿಮೆಂಟ್ ನಲ್ಲಿ ಚುನಾಯಿತರಾದ ಯುವ ಅಭ್ಯರ್ಥಿ ಡಾ. ಗೌರವ್ ಶರ್ಮಾ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮೊದಲು ನ್ಯೂಝಿಲೆಂಡ್ ನ ಪ್ರಾದೇಶಿಕ ಇಂಡಿಜಿನಿಯಸ್ ಮವೊರಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು, ನಂತರ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ನ್ಯೂಝಿಲೆಂಡ್ ಹೈ ಕಮಿಷನ್ ಮುಕ್ತೇಶ್ ಪರದೇಶಿ ತಿಳಿಸಿದ್ದಾರೆ.
ಹಿಂದಿ ಬಿಟ್ಟು ಸಂಸ್ಕೃತದಲ್ಲಿಯೇ ಪ್ರಮಾಣ ಸ್ವೀಕರಿಸಿದ ಬಗ್ಗೆ ಟ್ವೀಟ್ ಮಾಡಿ ವಿವರಣೆ ನೀಡಿದ ಡಾ.ಗೌರವ್, ಸಂಸ್ಕೃತ ಎಲ್ಲ ಭಾಷೆಗಳ ಮೂಲ, ಸಂಸ್ಕೃತದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರೆ ನನಗೆ ಮಾತನಾಡಲು ಸಾಧ್ಯವಿಲ್ಲದ ಭಾಷೆಗಳೂ ಸೇರಿದಂತೆ ಎಲ್ಲವಕ್ಕೂ ಗೌರವ ನೀಡಿದಂತಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
PublicNext
25/11/2020 06:33 pm