ವಾಷಿಂಗ್ಟನ್: ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ವಕೀಲ ರೂಡಿ ಗಿಯುಲಿಯಾನಿ ಅವರ ಮುಖದ ಮೇಲೆ ಕಪ್ಪು ನೀರು ಹರಿದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ 76 ವರ್ಷದ ರೂಡಿ ಗಿಯುಲಿಯಾನಿ ಅವರು ಬೆವರಲು ಆರಂಭಿಸಿದರು. ಹೀಗಾಗಿ ಅವರು ತಲೆಗೆ ಹಚ್ಚಿದ್ದ ಹೇರ್ ಡ್ರೈ ಬೆವರಿನ ಜೊತೆಗೆ ಮುಖದ ಮೇಲೆ ಬಂದಿತ್ತು. ಇದನ್ನು ಅರಿಯದೆ ಮಾತು ಮುಂದುವರಿಸಿದ್ದರು. ಬಳಿಕ ಕರವಸ್ತ್ರದ ಸಹಾಯದಿಂದ ಮುಖವನ್ನು ಒರೆಸಿಕೊಂಡರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ''ಅವರು ಹೇಳುತ್ತಿರುವುದು ಸುಳ್ಳು'' ಎನ್ನುವುದನ್ನು ಕಪ್ಪು ಬಣ್ಣ ಹೇಳುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
PublicNext
20/11/2020 01:23 pm