ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ಕೌಶ್ಯಲದ ಕೊರತೆ ಇದೆ. ವಿದ್ಯಾರ್ಥಿಯಂತೆ ಬಾಲಿಶ ಉತ್ಸಾಹದಿಂದ ಶಿಕ್ಷಕರನ್ನ ಮೆಚ್ಚಿಸಲು ಯತ್ನಿಸುತ್ತಾರೆ.
ಆದರೆ, ವಿಷಯ ಪರಿಣತಿಯ ಕೊರತೆ ಎದ್ದುಕಾಣುತ್ತದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಾವು ಬರೆದ ಪುಸ್ತಕದಲ್ಲಿ ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿದ್ದಾರೆ.
ಒಬಾಮ ತಮ್ಮ ಪುಸ್ತಕದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಸಹ ಉಲ್ಲೇಖಿಸಿದ್ದಾರೆ.ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮರ ಮಾತುಗಳು ಈಗ ಟ್ವಿಟರ್ ನಲ್ಲಿ ಟ್ರೆಂಡ್ ಆಗ್ತಿದೆ.
ಇದೀಗ, ಒಬಾಮ ಅಭಿಪ್ರಾಯದ ಆಧಾರದ ಮೇಲೆ ಬಿಜೆಪಿ ಪಕ್ಷದವರು ರಾಹುಲ್ ಗೆ ಪರೋಕ್ಷವಾಗಿ ವ್ಯಂಗ್ಯ ಮಾಡುತ್ತಿದ್ದಾರೆ.
PublicNext
13/11/2020 11:28 am