ವಾಷಿಂಗ್ಟನ್ : ವಿಶ್ವದ ಗಮನ ಸೆಳೆದಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ಗೆಲುವಿನ ಸಂಭ್ರಮದಲ್ಲಿದ್ದಾರೆ.
ಆದರೆ ಇತ್ತ ಡೊನಾಲ್ಡ್ ಟ್ರಂಪ್ ಕೂಡಾ ಸೋಲೊಪ್ಪಿಕೊಂಡಿಲ್ಲ. ಬೈಡೆನ್ ಗೆದ್ದಿದ್ದಾರೆಂದು ಘೋಷಿಸಿದ ಬಳಿಕ ಸುಮಾರು ಐದು ಗಂಟೆ ಮೌನವಾಗಿದ್ದ ಟ್ರಂಪ್ ಮತ್ತೆ ಟ್ವೀಟ್ ಮಾಡಿ ತಾನೇ ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ.
ಅಲ್ಲದೇ ಈ ಚುನಾವಣೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಟ್ರಂಪ್ '‘ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಜೊತೆಗೆ ಯಾವುದೇ ಆಧಾರವಿಲ್ಲದೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಮತ ಎಣಿಕೆಯಲ್ಲಿ ಲೋಪವಾಗಿದೆ.
ಪೆನ್ಸಿಲ್ವೇನಿಯಾದಲ್ಲಿ ಅಕ್ರಮವಾಗಿ 10,000 ಮತ ಚಲಾಯಿಸಲಾಗಿದೆ ಎಂದು ಮತ್ತೊಮ್ಮೆ ಆರೋಪಿಸಿದ್ದಾರೆ.
‘ಬಾಗಿಲು, ಕಿಟಕಿಗಳನ್ನು ಮುಚ್ಚಿ ಮತ ಎಣಿಕೆ ವೇಳೆ ಅಕ್ರಮ ಎಸಗಲಾಗಿದೆ. ಒಳಗಡೆ ಏನೋ ಅಕ್ರಮ ಆಗಿ, ‘ದೊಡ್ಡ’ ಬದಲಾವಣೆ ಆಗಿದೆ' ಎಂದಿದ್ದಾರೆ.
ಏಳು ಕೋಟಿಯ 10 ಲಕ್ಷ ದಾಖಲೆಯ ಮತ, ಇಷ್ಟು ಪ್ರಮಾಣದ ಮತ ಈವರೆಗೂ ಯಾವೊಬ್ಬ ಅಧ್ಯಕ್ಷರಿಗೂ ಸಿಕ್ಕಿರಲಿಕ್ಕಿಲ್ಲ ಎಂದು ಟ್ರಂಪ್ ಆರೋಪಿಸಿದ್ದಾರೆ.
ಟ್ರಂಪ್ ಈ ಹಿಂದೆಯೂ ಮೇಲ್ ಇನ್ ಬ್ಯಾಲೆಟ್ಸ್ ಸಂಬಂಧ ಅನುಮಾನ ವ್ಯಕ್ತಪಡಿಸಿದ್ದರು.
PublicNext
08/11/2020 11:55 am