ಇಸ್ಲಾಮಾಬಾದ್: ಪಾಪಿ ಪಾಕಿಸ್ತಾನ ತನ್ನ ಘೋರಕೃತ್ಯವನ್ನು 20 ತಿಂಗಳ ಬಳಿಕ ಒಪ್ಪಿಸಿಕೊಂಡಿದೆ. ಪುಲ್ವಾಮಾ ದಾಳಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಒಂದು ಸಾಧನೆ ಎಂದು ಪಾಕಿಸ್ತಾನದ ಫೆಡರಲ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಫವಾದ್ ಚೌಧರಿ, "ನಾವು ಭಾರತದೊಳಗೆ ಪ್ರವೇಶಿಸುವ ಮೂಲಕ ಭಾರತೀಯ ಯೋಧರನ್ನು ಹೊಡೆದಿದ್ದೇವೆ. ಇದು ಇಡೀ ಸಮುದಾಯದ ಸಾಧನೆಯಾಗಿದೆ. ನೀವು ಮತ್ತು ನಾವು ಎಲ್ಲರೂ ಆ ಸಾಧನೆಯ ಭಾಗವಾಗಿದ್ದೇವೆ" ಎಂದು ಹೇಳಿದ್ದಾರೆ.
ಫವಾದ್ ಚೌಧರಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತೀಯರು ಪಾಕ್ ಸಚಿವನ ವಿರುದ್ಧ ಕಿಡಿಕಾರಿದ್ದಾರೆ.
PublicNext
29/10/2020 07:20 pm