ಪಾಟಲಿಪುತ್ರ: ಬಿಹಾರ ಸಿಎಂ ಆಗಿ 20 ವರ್ಷ ಕಳೆದಿರುವ ನಿತೀಶ್‌ಕುಮಾರ್ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಫೇಲ್ ಆಗಿದ್ದಾರೆ ಎಂಬುದು ಅಲ್ಲಿನ ಜನಾಭಿಪ್ರಾಯ.
ಇದಕ್ಕೆ ಸಾಕ್ಷಿ ಎಂಬಂತೆ ಸ್ವತಃ ನಿತೀಶ್‌ಕುಮಾರ್ ಅವರೇ ಇಂದು ವಿದ್ಯುತ್ ಅಭಾವದ ಸಮಸ್ಯೆ ಅನುಭವಿಸಿದ್ದಾರೆ. ಪಾಟಲಿಪುತ್ರ ನಗರದ ಕ್ರೀಡಾ ಸಂಕೀರ್ಣದಲ್ಲಿ ಇಂದು ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಕಾರ್ಯಕ್ರಮ ನಡೆಯುತ್ತಿರುವಾಗಲೇ ವಿದ್ಯುತ್ ಕೈ ಕೊಟ್ಟಿದೆ. ಹೀಗಾಗಿ ಸಿಎಂ ಸಹಿತ ಡಿಸಿಎಂ ತೇಜಸ್ವಿ ಯಾದವ್ ಹಾಗೂ ಎಲ್ಲ ಗಣ್ಯರು ಸುಮಾರು ಹೊತ್ತು ಅಸಹಾಯಕರಾಗಿ ಕುಳಿತುಕೊಂಡಿದ್ದರು.
PublicNext
02/09/2022 11:00 pm