ಶಿರಾ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಇಂದು ಮಾಜಿ ಸಚಿವ ಟಿ ಬಿ ಜಯಚಂದ್ರ ಮದಲೂರು ಕೆರೆ ವೀಕ್ಷಣೆಗೆ ತೆರಳಿದ್ದಾರೆ. ಇನ್ನು ಕಳೆದ ವರ್ಷ ಕೆರೆ ತುಂಬಿದ್ದ ಸಂದರ್ಭದಲ್ಲಿ ಏರಿಯ ಒಂದು ಭಾಗದಲ್ಲಿ ಮರ ಬಿದ್ದು ನೀರು ಪೋಲಾಗಿದ್ದ ಜಾಗದಲ್ಲಿ, ಹೊಸದಾಗಿ ಕಾಮಗಾರಿ ಆರಂಭಿಸಿ ಆರು ತಿಂಗಳು ಕಳೆ ದರು ಕಾಮಗಾರಿ ಮುಗಿದಿಲ್ಲ.
ಇದನ್ನು ಗಮನಿಸಿ, ಮಳೆಯ ಕಾರಣ ಕೆರೆಗೆ ಹೆಚ್ಚಿನ ನೀರು ಬರುತ್ತಿದ್ದು ಕೆರೆ ತುಂಬಿದರೆ ಈ ಜಾಗದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಕರೆ ಮಾಡಿ ಈ ಕೂಡಲೇ ಕಾಮಗಾರಿ ಮುಗಿಸಲು ತಾಕೀತು ಮಾಡಿದರು.
ಇದರ ಪರಿಣಾಮ ದಿಂದ 6 ತಿಂಗಳಲ್ಲಿ ಮಾಡದಿದ್ದ ಕೆಲಸವನ್ನು ಕೇವಲ 6 ಗಂಟೆಗಳಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಮಾಜಿ ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್
PublicNext
04/08/2022 05:29 pm