ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪತ್ನಿ ಚೆನ್ನಮ್ಮ ಜೊತೆಗೂಡಿ, ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು. ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪತ್ನಿ ಚೆನ್ನಮ್ಮ ಸೇರಿದಂತೆ ಅನೇಕ ಸಚಿವರು ಶಾಸಕರು ಬಾಗಿನ ಕಾರ್ಯಕ್ರಮ ನಡೆಸಿದರು.
ಜಲಾಶಯಕ್ಕೆ ಬಾಗಿನ ಅರ್ಪಿಸಿದಂತ ಸಿಎಂ ಬೊಮ್ಮಾಯಿ, ಆ ಬಳಿಕ ಕೆಆರ್‌ಎಸ್ ಅಣೆಕಟ್ಟೆಯ ಕಳಭಾಗದಲ್ಲಿರುವಂತ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ವೇಳೆ ಸಚಿವ ಡಾ.ನಾರಾಯಣಗೌಡ, ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಗೋವಿಂದ ಕಾರಜೋಳ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ತಮ್ಮಣ್ಣ, ಸಿ ಎಸ್ ಪುಟ್ಟರಾಜು, ಡಾ.ಕೆ ಅನ್ನದಾನಿ, ಎಂ ಶ್ರೀನಿವಾಸ್, ಸಂಸದರಾದಂತ ಮಧು ಮಾದೇಗೌಡ, ದಿವೇಶ್ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.
PublicNext
20/07/2022 04:34 pm