ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ಕಾರಿನ ಹಿಂದೆ 2 ಲಕ್ಷ ಹಣ ಎಸೆದ ಮುಸ್ಲಿಂ ಮಹಿಳೆ!

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಇತ್ತೀಚೆಗೆ ಕೋಮು ಸಂಘರ್ಷ ನಡೆದಿತ್ತು. ಇದರಲ್ಲಿ ಗಾಯಗೊಂಡವರಿಗೆ ಸಾಂತ್ವನ ಪರಿಹಾರ‌ ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಬಂದಿದ್ದರು‌. ಈ ವೇಳೆ ಸ್ಥಳೀಯ ಮುಸ್ಲಿಂ ಮಹಿಳೆಯೊಬ್ಬರು ನಮಗೆ ಹಣ ಬೇಡ, ನ್ಯಾಯ ಬೇಕು ಎಂದು ಸಿದ್ದರಾಮಯ್ಯ ಕಾರಿನ ಮೇಲೆ 2 ಲಕ್ಷ ಹಣ ಎಸೆದಿದ್ದಾರೆ.

ಗಲಭೆಯಲ್ಲಿ ಗಾಯಗೊಂಡವರ ಕ್ಷೇಮ ವಿಚಾರಿಸಲು ಸಿದ್ದರಾಮಯ್ಯ ಬಾಗಲಕೋಟೆ ಬಳಿಯ ಆಶೀರ್ವಾದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಹಣ ಎಸೆದ ಘಟನೆ ನಡೆದಿದೆ.

ಇದೇ ಹಣ ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳೆಯರನ್ನು ಸಿದ್ದರಾಮಯ್ಯ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಮಹಿಳೆಯರು ಈ ಮಾತನ್ನು ಕೇಳಿಲ್ಲ. ಈ ನಡುವೆ ರಾಜ್ಮ‌ ಎಂಬ ಮಹಿಳೆ ಸಿದ್ದರಾಮಯ್ಯ ಕಾರಿನ ಮೇಲೆ ಹಣ ಬಿಸಾಕಿದ್ದಾಳೆ.

Edited By :
PublicNext

PublicNext

15/07/2022 01:02 pm

Cinque Terre

129.39 K

Cinque Terre

36

ಸಂಬಂಧಿತ ಸುದ್ದಿ