ದಾವಣಗೆರೆ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮರ ಹೆಸರಿಡಬೇಕು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧಿಪತಿ ವಚನಾನಂದ ಶ್ರೀಗಳು ಹೇಳಿದ್ದಾರೆ.
ಹರಿಹರದ ಶ್ರೀಕ್ಷೇತ್ರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಟ್ಟರೆ ನಾವು ತುಂಬಾ ಖುಷಿಪಡುತ್ತೇವೆ. ಆದ್ರೆ ಬಿಎಸ್ ವೈ ಹೆಸರಿಡದಿದ್ದರೆ ಕೆಳದಿ ರಾಣಿ ಚೆನ್ನಮ್ಮರ ಹೆಸರು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದರು.
ಪಂಚಮಸಾಲಿ ಸಮಾಜದ ಕೆಳದಿ ರಾಣಿ ಚನ್ನಮ್ಮ ಅತ್ಯಂತ ಶ್ರೇಷ್ಠ ಮಹಾರಾಣಿಯಾಗಿದ್ದರು. ಬೆಂಗಳೂರಿನಲ್ಲಿ ಕೆಳದಿ ಚೆನ್ನಮ್ಮನ
350ನೇ ವರ್ಷದ ಪಟ್ಟಾಭಿಷೇಕ ಕಾರ್ಯ ಮಾಡಲಾಗಿತ್ತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿರಾಣಿ ಚೆನ್ನಮ್ಮನ ಹೆಸರಿಡಬೇಕು ಎಂದು ಅಂದೇ ಚರ್ಚೆ ಮಾಡಲಾಗಿತ್ತು.
ರಾಜ್ಯದಲ್ಲಿ ಸ್ತ್ರೀಯರ ಹೆಸರನ್ನು ಯಾವುದೇ ವಿಮಾನ ನಿಲ್ದಾಣಕ್ಕೆ ಇಟ್ಟಿಲ್ಲ. ಭಾರತದಲ್ಲಿ ಅನೇಕ ಧೃವತಾರೆಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮನ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಸಿಎಂ ಜೊತೆ ಮಾತನಾಡಿ ಬಿಎಸ್ ವೈ ಅವರೊಂದಿಗೆ ಚರ್ಚೆ ಕೂಡ ಮಾಡಲಾಗಿತ್ತು. ಸರ್ವಜನಾಂಗವನ್ನು ಒಟ್ಟಾಗಿ ತೆಗೆದುಕೊಂಡು ಹೋದವರು ಬಿಎಸ್ ವೈ. ಅವರು ಸಿಎಂ ಆದಾಗ ಮಠಗಳಿಗೆ ನೀಡಿದ ಅನುದಾನ,ದಿಟ್ಟ ಎದೆಗಾರಿಕೆ ಬಿಎಸ್ ವೈಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್ ವೈ ಹೆಸರಿಡಲು ನಿರ್ಧರಿಸಲಾಗಿತ್ತು. ಅದಕ್ಕೆ ತಕ್ಕಂತಹ ವರ್ಚಸ್ಸು ಅವರಿಗಿದೆ.ಆದರೆ ಬಿಎಸ್ ವೈ ಸಿಎಂಗೆ ಪತ್ರ ಬರೆದು ನನಗಿಂತಲೂ ಶ್ರೇಷ್ಠರಾದವರು. ಆದ್ದರಿಂದ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣ ಕ್ಕೆ ಕೆಳದಿ ರಾಣಿ ಚೆನ್ನಮ್ಮನ ಹೆಸರಿಡಬೇಕು ಎಂದು ಒತ್ತಾಯಿಸಿದರು.
PublicNext
25/04/2022 04:52 pm