ಚನ್ನಪಟ್ಟಣ: ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ 2022 ಚನ್ನಪಟ್ಟಣದ ಸರ್ಕಾರಿ ಹೈಸ್ಕೂಲ್‌ನ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆಯಿತು.
ಗಾಂಧಿನಗರ ಶಾಸಕ, ಮಾಜಿ ಸಚಿವ ದಿನೇಶ್ ಗುಂಡುರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು
ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಮಾಜದಲ್ಲಿ ಕಂದಕ ಮೂಡಿಸುತ್ತಿರುವ ಸೋಷಿಯಲ್ ಮೀಡಿಯಾಗಳ ಈ ಕಾಲದಲ್ಲಿ ಮಾಧ್ಯಮ ಕ್ಷೇತ್ರ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸಮಾಡುವ ಮೂಲಕ ಸಮಾಜ ಮತ್ತು ಜನತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆಸಲ್ಲಿಸಿದ ಹಿರಿಯರನ್ನು ಹಾಗೆಯೇ 25 ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ದಂಪತಿಗಳನ್ನು ಸನ್ಮಾನಿಸಲಾಯಿತು. ಸಾಹಿತಿ ಡಾ.ಪುತ್ತೂರಾಯ, ಹಿರಿಯ ಚಿತ್ರನಟ ಶಂಕರ್‌ಭಟ್, ವೈನ್‌ಬೋರ್ಡ್ ನಿರ್ದೇಶಕ ಅಭಿಲಾಷ್‌ಕಾರ್ತಿಕ್, ಚನ್ನಪಟ್ಟಣ ತಾಲೂಕು ವಿಕಾಸ ಸಂಸ್ಥೆಯ ಅಧ್ಯಕ್ಷ ಶ್ರೀನಾಥ್ ಜೋಷಿ, ಕಾರ್ಯದರ್ಶಿ ಹನುಮೇಶ್‌ಯಾವಗಲ್, ಪದಾಧಿಕಾರಿಗಳಾದ ರಾಘವೇಂದ್ರ ಮಯ್ಯ, ಶ್ರೀಧರ್ ಭಾಗವತ್, ಅಚ್ಯುತ್ ಸಂಕೇತಿ, ಅರುಣ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ವಿಕಾಸದ ಸಂಚಾಲಕರಾದ ರಾಘವೇಂದ್ರ ಮಯ್ಯ ಹಾಗೂ ನಂದಕುಮಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.
PublicNext
25/04/2022 03:24 pm