ಕೊಪ್ಪಳ : ಹಾಳಾದ ರಸ್ತೆ ಅಭಿವೃದ್ಧಿ ಬಗ್ಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವುದಕ್ಕೆ ಯುವಕನ ಮನೆಗೆ ಪೊಲೀಸರು ಆಗಮಿಸಿ ಠಾಣೆಗೆ ಕರೆದೊಯ್ಯಲು ಮುಂದಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಉಳೇನೂರು ಗ್ರಾಮದ ಯುವಕ ಸುರೇಶ ಮಡಿವಾಳರ ಸಿದ್ದಾಪೂರ-ನಂದಿಹಳ್ಳಿ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿರುವ ಕುರಿತು ಪ್ರಶ್ನಿಸಿ ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಇನ್ನು ಮನೆಗೆ ಬಂದ ಪೊಲೀಸರು ಠಾಣೆಗೆ ಬರದಿದ್ದರೆ ಎಫ್ ಐಆರ್ ಮಾಡುವುದಾಗಿ ಬೆದರಿಕೆ ಹಾಕಿರೋದಾಗಿ ಪೊಲೀಸ್ ಅಧಿಕಾರಿ ಸುರೇಶ ಮಡಿವಾಳ ಆರೋಪ ಮಾಡಿದ್ದಾರೆ.
PublicNext
19/01/2022 11:45 am