ಬೆಂಗಳೂರು: 'ನಾನು ಐದು ಜನರ ತಲೆ ತೆಗೆಯಬೇಕಾಗಿದೆ ಅನುಮತಿ ಕೊಡ್ತೀರಾ?' ಎಂದು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಅವರು ವಿಧಾನಸಭೆಯ ಕಲಾಪದಲ್ಲಿ ವಿಚಿತ್ರ ಪ್ರಸ್ತಾಪ ಮುಂದಿಟ್ಟಿದ್ದಾರೆ.
ರಮೇಶ್ ಕುಮಾರ್ ಅವರು ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್‌ಗಳ ವಿಚಾರವಾಗಿ ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಅಕ್ರಮಕ್ಕೆ ಆಗ್ರಹಿಸಿದರು. ಅದರಲ್ಲ ಮುಳಬಾಗಿಲು, ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್‌ಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಈ ಬಗ್ಗೆ ಮಾತನಾಡಿದ ರಮೇಶ್ ಕುಮಾರ್, ಹಂಪ್ ಹಾಕುವ ಮತ್ತು ತೆಗೆಯುವ ನಿರ್ಧಾರ ಪಿಡಬ್ಲ್ಯೂಡಿ ಅಧಿಕಾರಿಗಳ ಜವಾಬ್ದಾರಿಯಲ್ಲವೇ? ರಸ್ತೆಗಳಿಗೆ ಪಿಡಬಡ್ಲ್ಯೂಡಿ ಅಧಿಕಾರಿಗಳು ಹೋಗಿ ನೋಡಿದ್ದಾರಾ? ನಿಮ್ಮ ಅಧಿಕಾರಿಗಳನ್ನು ಈ ಸದನ ಮುಗಿಯುವ ಒಳಗೆ ಅಮಾನತು ಮಾಡಿ. ಸುಮ್ಮನೆ ಅವೈಜ್ಞಾನಿಕವಾಗಿ ಹಂಪ್ ಗಳನ್ನು ಹಾಕಬೇಡಿ ಎಂದು ಅಸಮಾಧಾನ ಹೊರ ಹಾಕಿದರು.
PublicNext
20/09/2021 04:30 pm