ಹಾವೇರಿ: ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಕ್ಷೇತ್ರದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಕ್ಷೇತ್ರದ ಜನರ ಬಹುದಿನದ ಕನಸು ನನಸು ಮಾಡುವ ಮೂಲಕ ಭರವಸೆ ಉಳಿಸಿಕೊಂಡಿದ್ದಾರೆ. ಶಿಗ್ಗಾವಿ ಏತ ನೀರಾವರಿ ಯೋಜನೆಯ 39 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಸಿಎಂ ಚಾಲನೆ ನೀಡಿದ್ದಾರೆ.
ಶಿಗ್ಗಾವಿ ತಾಲ್ಲೂಕಿನ ಕಲಕಟ್ಟಿ (ರಾಜೀವ ಗ್ರಾಮ) ಸಮೀಪ ₹34 ಕೋಟಿ ವೆಚ್ಚದ ಶಿಗ್ಗಾವಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೆರೆ ತುಂಬಿಸುತ್ತೇನೆ ಎಂದು ಜನರಿಗೆ ಮಾತನ್ನು ಕೊಟ್ಟಿದ್ದೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಕ್ಕೆ ಖುಷಿ ಇದೆ ಎಂದಿದ್ದಾರೆ.
ಸವಣೂರು ಏತ ನೀರಾವರಿ ಯೋಜನೆಯ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಉದ್ಘಾಟನೆ ನೆರವೇರಿಸುತ್ತೇನೆ. ಶಿಗ್ಗಾವಿ ಮತ್ತು ಸವಣೂರ ಏತ ನೀರಾವರಿ ಯೋಜನೆಗಳನ್ನು ಹೂವಿನ ಮಾಲೆಯ ರೀತಿ ಪೋಣಿಸಿ, ನೀರು ಕಲ್ಪಿಸಿದ್ದೇನೆ ಎಂದರು.
PublicNext
02/09/2021 01:52 pm