ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ನಮ್ಮ ಕುಟುಂಬಕ್ಕೆ ಸದಾ ಸ್ಥಾನ ಸಿಗಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ (ಅಥಣಿ): ಬಿಜೆಪಿ ಒಂದು ಶಿಸ್ತುಬದ್ದ ರಾಷ್ಟ್ರೀಯ ರಾಜಕೀಯ ಪಕ್ಷ ಎನ್ನುವವರಿಗೆ ಅವರ ನಾಯಕರು ಬುದ್ಧಿ ಹೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

ಆಥಣಿ ಪಟ್ಟಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡಿದ ಅವರು ಸಿಟಿ ರವಿ ಹಾಗೂ ಈಶ್ವರಪ್ಪನವರು ಉನ್ನತ ಮಟ್ಟದ ಸ್ಥಾನಮಾನದಲ್ಲಿದ್ದಾರೆ ಅಂತವರೇ ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡ್ತಾ ಹೋದ್ರೆ ನಾವು ಅದಕ್ಕೆಲ್ಲಾ ಉತ್ತರ ಕೊಡೋಕೆ ಆಗುವುದಿಲ್ಲ ಇದರಿಂದ ಅವರ ಪಕ್ಷಕ್ಕೆ ಹಾನಿ ಎಂದು ಸತೀಶ್ ಹೇಳಿದರು.

ಇದೆ ವೇಳೆ ಸುದ್ದಿಗಾರರ ಪ್ರಶ್ನೆಗಳಾದ ಈ ಬಾರಿ ಯಾರೊಬ್ಬರು ಜಾರಕಿಹೊಳಿ ಕುಟುಂಬದಿಂದ ಮಂತ್ರಿ ಅಗಲಿಲ್ಲ‌ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದಾ ಜಾರಕಿಹೊಳಿ ಕುಟುಂಬಸ್ಥರು ಸಚಿವ ಸ್ಥಾನದಲ್ಲಿ ಇರಬೇಕೆಂದು ಅಂಬೇಡ್ಕರ್ ಸಂವಿಧಾನದಲ್ಲಿ ಬರದಿಲ್ಲವೆಂದು ತಿಳಿಸಿದರು.

ಇದೆ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಮ್ ಘೋಷಣೆಯ ಮಾತು ಈಗಿಲ್ಲ, ಚುನಾವಣೆ ಬಳಿಕ ನಾವು ಗೆದ್ದ ಮೇಲೆ ಮೇ ತಿಂಗಳಲ್ಲಿ ಗೊತ್ತಾಗುತ್ತದೆ ಎಂದರು. ಈ ಬಗ್ಗೆ ಪಕ್ಷ ನಿರ್ಣಯ ಮಾಡುತ್ತದೆ ಎಂದು ತಿಳಿಸಿದರು.

ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯ ಅಧಿಕಾರ ಅವಧಿಯಲ್ಲಿ ಪೆಟ್ರೊಲ್, ಡಿಸೇಲ್ ಸೇರಿದಂತೆ ದಿನನಿತ್ಯ ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಲೆವೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಪ್ರತಿಭಟನೆ ಮಾಡುತ್ತೆ.‌ ಮತ್ತು ಮುಂದಿನ ಚುನಾವಣೆಗಳಲ್ಲಿ ಜನರು ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ತಿಳಿಸಿದರು.

Edited By : Manjunath H D
PublicNext

PublicNext

16/08/2021 07:38 am

Cinque Terre

77.54 K

Cinque Terre

1

ಸಂಬಂಧಿತ ಸುದ್ದಿ