ದಾವಣಗೆರೆ: ರಾಜ್ಯದ ನೆಲ, ಜಲ ವಿಚಾರಕ್ಕೆ ಬಂದರೆ ನಾವು ಯಾರಿಗೂ ಬಗ್ಗಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡಿಯುವ ಹಾಗೂ ಜಲ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡ್ಡಿ ಇಲ್ಲ. ನಮ್ಮ ರಾಜ್ಯದ ನೀರು ಬಳಕೆ ಮಾಡಲು ಬೇರೆ ರಾಜ್ಯದ ಅಪ್ಪಣೆ ಬೇಕಿಲ್ಲ. ಅರಣ್ಯ ಇಲಾಖೆ ಸೇರಿ ಇತರೆ ಇಲಾಖೆ ನಿರಪೇಕ್ಷಣೆಗಾಗಿ ಪ್ರಯತ್ನಿಸುತ್ತಿದ್ದೇವೆ. ಈ ವಿಷಯದಲ್ಲಿ ತಮಿಳುನಾಡು ಖ್ಯಾತೆ ತೆಗೆಯೋದು ಸರಿಯಲ್ಲ. ನಮ್ಮ ಪಾಲಿನ ನೀರನ್ನು ಕಬಳಿಸುವುದು ಸರಿಯಲ್ಲ, ಕಾನೂನಾತ್ಮಕವಾಗಿ ತಾಂತ್ರಿಕ ಪರಿಣಿತರಿಂದಈ ಪ್ರಕರಣ ಎದುರಿಸುತ್ತೇವೆ. ರಾಜಕಾರಣ ಮಾಡದೇ ಎಲ್ಲಾ ಪಕ್ಷದವರೂ ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದಿದ್ದಾರೆ.
PublicNext
14/08/2021 02:03 pm