ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶುರುವಾಗಲಿದೆ ಮುಂಬೈ ಲೋಕಲ್ ರೈಲು: ಷರತ್ತುಗಳು ಅನ್ವಯ

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಗಸ್ಟ್ 15 ರಿಂದ ಮುಂಬೈನ ಜೀವನಾಡಿ ಎಂದು ಪರಿಗಣಿಸಲಾಗುವ ಸ್ಥಳೀಯ ರೈಲನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರದಿಂದ ಜನರು ಸಾಕಷ್ಟು ಪರಿಹಾರ ಪಡೆಯುವ ನಿರೀಕ್ಷೆಯಿದೆ.

ಮುಂಬೈ ಸ್ಥಳೀಯ ರೈಲು ಸೇವೆಗಳು ಆಗಸ್ಟ್ 15 ರಿಂದ ಆರಂಭವಾಗಲಿವೆ. ಆರಂಭದಲ್ಲಿ, ಕರೋನಾ ಲಸಿಕೆಯ ಎರಡೂ ಡೋಸ್ ಪಡೆದ ಪ್ರಯಾಣಿಕರಿಗೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಸಿಎಂ ಹೇಳಿದರು. ರೈಲಿನಲ್ಲಿ ಪ್ರಯಾಣಿಸುವಾಗ, ಪ್ರಯಾಣಿಕರು ಕರೋನಾ ಲಸಿಕೆ ಎರಡೂ ಡೋಸ್‌ಗಳನ್ನು ಪಡೆದಿರುವ ಪ್ರಮಾಣಪತ್ರಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇದು ಮಾತ್ರವಲ್ಲ, ಲಸಿಕೆ ಪಡೆದು 14 ದಿನಗಳ ನಂತರವೇ, ಪ್ರಯಾಣಿಕರಿಗೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು. 15 ದಿನಗಳ ಹಿಂದೆ ಕೋವಿಡ್ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡವರಿಗೆ ಈ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಕರೋನಾ ಲಸಿಕೆ ಪಡೆದು 14 ದಿನಗಳು ಪೂರ್ಣಗೊಂಡಿಲ್ಲದಿದ್ದರೆ ಮುಂಬೈ ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Edited By : Nagaraj Tulugeri
PublicNext

PublicNext

09/08/2021 10:20 am

Cinque Terre

31.94 K

Cinque Terre

0

ಸಂಬಂಧಿತ ಸುದ್ದಿ