ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮಳೆ ಹಾನಿ- ಸಂಕಷ್ಟಕ್ಕೆ ಧಾವಿಸಿದ ಶಾಸಕರ ಕಚೇರಿ

ತುಮಕೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ರಣಭೀಕರ ಮಳೆಗೆ ತುಮಕೂರು ನಗರದ ಕೆಲ ಭಾಗಗಳಿಗೆ ನೀರು ನುಗ್ಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಈ ಮಧ್ಯೆ ತುಮಕೂರು ನಗರ ಶಾಸಕ ಜಿ ಬಿ ಜ್ಯೋತಿಗಣೇಶ್ ಸಂಕಷ್ಟಕ್ಕೊಳಗಾಗಿರುವ ಜನರ ನೆರವಿಗೆ ಧಾವಿಸಿ ಸಹಾಯ ಕೇಂದ್ರ ತೆರೆದು ನೊಂದ ಜನರ ನೆರವಿಗೆ ನಿಂತಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ಸಹಾಯವಾಣಿ ಜೊತೆಗೆ ಶಾಸಕರ ಕಚೇರಿಯಿಂದಲೂ ಸಹ ಸಹಾಯವಾಣಿ ತೆರೆಯಲಾಗಿದೆ. ನೀರು ನುಗ್ಗಿರುವ ಪ್ರದೇಶಗಳ ಜನರನ್ನು ಸುರಕ್ಷಿತ ಸ್ತಳಕ್ಕೆ ರವಾನಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕ್ಯಾತ್ಸಂದ್ರದ ಟ್ರಕ್ ಟರ್ಮಿನಲ್, ಸದಾಶಿವ ನಗರದ ಅಂಭಾವಿಲಾಸ, ಮಹಾನಗರ ಪಾಲಿಕೆ ಸಮುದಾಯ ಭವನ, ಚಿಕ್ಕಪೇಟೆಯ ದಿವಾನ್ ಪೂರ್ಣಯ್ಯ ಛತ್ರ ಒಟ್ಟು ಈ ನಾಲ್ಕು ಸ್ತಳಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗೆ 9844500730 ಅಥವಾ 9448989998 ಸಂಪರ್ಕಿಸಬಹುದಾಗಿದೆ.

Edited By : Vijay Kumar
PublicNext

PublicNext

03/08/2022 02:53 pm

Cinque Terre

24.14 K

Cinque Terre

0

ಸಂಬಂಧಿತ ಸುದ್ದಿ