ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಲಿ ಎದ್ದು ಹೊಲ ಮೇಯ್ದಂತೆ...ಬಿಬಿಎಂಪಿ ಎದ್ದು ಮೋರಿ ನುಂಗಿತು...!

ವಿಶೇಷ ವರದಿ-- ಪ್ರವೀಣ ನಾರಾಯಣ ರಾವ್..

ಬೆಂಗಳೂರು: ಮಹಾನಗರದಲ್ಲಿ ಸೆಪ್ಟೆಂಬರ್ ಮೊದಲವಾರದಲ್ಲಿ ಸುರಿದ ನಿರಂತರ

ಮಳೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯ, ಪೂರ್ವ ವಲಯ ಮತ್ತು ಬೊಮ್ಮನಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ಯಾವರೀತಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.

ಈ ಭಾಗಗಳಲ್ಲಿ ರಾಜಕಾಲುವೆಗಳನ್ನು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಪ್ರತಿಷ್ಟಿತ ಬಿಲ್ಡರ್ ಸಂಸ್ಥೆಗಳು ನಿರ್ಮಿಸಿದ್ದ ಬೃಹತ್ ವಸತಿ ಸಂಕೀರ್ಣಗಳು, ವಸತಿ ಸಮುಚ್ಛಯಗಳು, ವಾಣಿಜ್ಯ ಸಮುಚ್ಛಯಗಳು, Tech Park ಗಳು, IT / BT ಕಂಪೆನಿಗಳ ಕಾರಣದಿಂದಾಗಿಯೇ ಈ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು ಎಂಬುದು ಈಗಾಗಲೇ ರುಜುವಾತಾಗಿರುವ ವಿಷಯ.

ಅದೇ ರೀತಿ ಕೇವಲ ಖಾಸಗಿ ಸಂಸ್ಥೆಗಳು ಮಾತ್ರವಲ್ಲದೇ, ಸ್ವತಃ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರೂ ರಾಜಾಕಾಲುವೆ,ಕೆರೆ ಒತ್ತುವರಿ ಮಾಡಿರುವ ವಿಚಾರ ಈಗಾಗಲೇ ಜಗಜ್ಜಾಹೀರಾಗಿದೆ..

ಬೆಂಗ ಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಛೇರಿಗೆ ಕೂಗಳತೆಯ ದೂರದಲ್ಲಿರುವ / ಟೌನ್ ಹಾಲ್ ಗೆ ಅತ್ಯಂತ ಸಮೀಪದಲ್ಲಿರುವ ಜೆ. ಸಿ. ರಸ್ತೆಯಲ್ಲಿ ಕೋರಮಂಗಲ ಕಣಿವೆಯ ಬೃಹತ್ ನೀರುಗಾಲುವೆ (Primary Drain) ಯನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಪಾಲಿಕೆಯೇ ಸ್ವತಃ ಮೂರು ನಾಲ್ಕು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದು, ಕಳೆದ 03 ದಶಕಗಳಿಂದ ಈ ಕಟ್ಟಡಗಳು ಇಲ್ಲಿದ್ದು ಶಿಥಿಲಾವಸ್ಥೆಯನ್ನು ತಲುಪಿವೆ..

ರಾಜಾಕಾಲುವೆಯ ಮೇಲೆಯೇ ಈ ಕಟ್ಟಡಗಳು ಇರುವುದರಿಂದ ಕಾಲುವೆಯ ಹೂಳು ತೆಗೆಯಲೂ ಸಾಧ್ಯವಾಗದೆ ಮಳೆ ಬಂದಾಗ ನೀರು ಈ ಭಾಗದಲ್ಲಿ‌ನುಗ್ಗುವಂತಾಗಿದೆ..ಈ ಕುರಿತು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಅವರು ಈಗಾಗಲೇ ಬಿಬಿಎಂಪಿ ಆಯುಕ್ತರಿಗೆ, ಆಡಳಿತಾಧಿಕಾರಿಗಳಿಗೆ ಪತ್ರಕೂಡಾ ಬರೆದಿದ್ದಾರೆ.. ಒತ್ತುವರಿ ಕುರಿತ ವರದಿ ಇಲ್ಲಿದೆ...

Edited By : Somashekar
PublicNext

PublicNext

29/09/2022 07:14 pm

Cinque Terre

179.59 K

Cinque Terre

0

ಸಂಬಂಧಿತ ಸುದ್ದಿ