ಬೆಂಗಳೂರು: ಹೈಕೋಟ್೯ ಚಾಟಿ ಬೀಸಿದ್ದಾಯ್ತು. ಜನ ಹಿಡಿ ಶಾಪ ಆಕಿದ್ದಾಯ್ತು. ಎಷ್ಟೋ ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದು ಕೂಡಾ ಆಯ್ತು. ಆಗ ಮಾತ್ರ ಯಾವ ರಸ್ತೆಗಳು ಬಿಬಿಎಂಪಿ ಅಧಿಕಾರಿಗಳಿಗೆ ಕಣ್ಣಿಗೆ ಕಾಣಿಸಲಿಲ್ಲ. ಆದ್ರೆ ಈಗ ಮೋದಿ ಬಂದ್ರು ಅನ್ನೋ ಕಾರಣಕ್ಕೆ ಬರೋಬ್ಬರಿ 24 ಕೋಟಿ ವೆಚ್ಚ ಮಾಡಿದಾರಂತೆ.
ವಾ.ಓ: ಹೌದು ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಪ್ರಧಾನಿ ನರೇಂದ್ರ ಮೋಧಿ ನೆನ್ನೆ ಬೆಂಗಳೂರಿಗೆ ಭೇಟಿ ಕೊಟ್ಟಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಮೋದಿ ಬೆಂಗಳೂರಿನಲ್ಲಿ ಇದ್ದಿದ್ದು. ಕೇವಲ 4 ಗಂಟೆಗಳು ಮಾತ್ರ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿರೋ ನೆಪದಲ್ಲಿ ಬಿಬಿಎಂಪಿ ಅಧಿಕಾರಿಗಳು ಬರೋಬ್ಬರಿ 24 ಕೋಟಿ ಹಣ ವೆಚ್ಚ ಮಾಡಿದ್ದಾರಂತೆ. ಡಾಂಬರ್ ನಿರ್ಮಾಣಕ್ಕೆ ಖರ್ಚಾಗಿದ್ದು 14 ಕೋಟಿ. ಸ್ಟ್ರೀಟ್ ಲೈಟ್, ಮೀಡಿಯನ್ ನಿರ್ವಹಣೆ, ಚರಂಡಿ ದುರಸ್ತಿ, ಬಣ್ಣ ಬಳಿಯಲು ಖರ್ಚಾಗಿದ್ದು 10 ಕೋಟಿ. ಅಂತ ರಾಜಾರೋಷವಾಗಿ ಬಿಬಿಎಂಪಿ ಹೇಳ್ತಿದೆ.
ಸದ್ಯ ಮೋದಿ ಸಂಚಾರ ಮಾಡಿರೋ ಕೊಮ್ಮಘಟ್ಟ ಸಂಪರ್ಕ ಕಲ್ಪಿಸವ ರಸ್ತೆ ಹಾಗೂ ಹೆಬ್ಬಾಳ ಫ್ಲೈ ಓವರ್ ಸಂಪರ್ಕ ಕಲ್ಪಿಸೋ ರಸ್ತೆ,
ಅಂಬೇಡ್ಕರ್ ಕಾಲೇಜಿಗೆ ಸಂಪರ್ಕ ಕಲ್ಪಿಸೋ ರಸ್ತೆಗಳಿಗೆ ಡಾಂಬರ್ ಹಾಕಲಾಗಿದೆ.
ಇಷ್ಟು ದಿನ ಕಣ್ಮುಚ್ಚಿ ಕೂತಿದ್ದ ಪಾಲಿಕೆ ಅಧಿಕಾರಿಗಳು ಕೇವಲ ಪ್ರದಾನಿ ಸಂಚಾರದ ರಸ್ತೆಗೆ ಮಾತ್ರ ಡಾಂಬರೀಕರಣ ಮಾಡಿ. ಉಳಿದ ಕಡೆ ಕನಿಷ್ಟ ರಸ್ತೆ ಗುಂಡಿಗಳನ್ನು ಕೂಡಾ ಮುಚ್ಚಿಲ್ಲ. ಇದ್ರಿಂದ ಪ್ರಧಾನಿಗಳನ್ನ ಇಡೀ ನಗರದಾದ್ಯಂತ ರೋಡ್ ಷೋ ಮಾಡಿದ್ರೆ ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ರಸ್ತೆಗಳು ಸರಿಹೋಗಬಹುದು ಅಂತ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಮೋದಿ ಬಂದ ರಸ್ತೆಗಳಿಗೆ ಡಾಂಬರೀಕರಣ ಮಾಡಿರೋದು ಒಳ್ಳೆಯ ವಿಷಯ. ಆದ್ರೆ ಅದೇ ರೀತಿಯ ಕಾಳಜಿ ಬೇರೆ ರಸ್ತೆಗಳ ಮೇಲೆ ಯಾಕೆ ತೋರಿಸೋದಿಲ್ಲ? ಇನ್ನು ಗುತ್ರಿಗೆದಾರರ ಅವಧಿ ಮೂರು ವರ್ಷಗಳು ಇರುತ್ತೆ ಅದರ ದುಂದು ವೆಚ್ಚ ಯಾರು ಧರಿಸಬೇಕು ಅನ್ನೋದು ಸಾರ್ವಜನಿಕರ ಆಕ್ರೋಶವಾಗಿದೆ.
PublicNext
21/06/2022 08:21 pm