ದೆಹಲಿ: ಶಿಲಾನ್ಯಾಸದಲ್ಲಿ ನನ್ನ ಹೆಸರಿಲ್ಲ.ಅಲ್ಲದೇ ನನಗೆ ಆಮಂತ್ರಣ ಕೂಡ ನೀಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸಿಡಿಮಿಡಿಗೊಂಡ ಘಟನೆ ದೆಹಲಿಯ ಕರ್ನಾಟಕ ಭವನದಲ್ಲಿ ನಡೆದಿದೆ.
ಸಿಎಂ ಬಿಎಸ್ ಯಡಿಯೂರಪ್ಪ ಕರ್ನಾಟಕ ಭವನದ ಭೂಮಿ ಪೂಜೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶಗೊಂಡಿರುವ ಪ್ರಸಂಗ ನಡೆದಿದೆ.
ದೆಹಲಿಯ ಚಾಣಕ್ಯ ಪುರಿಯಲ್ಲಿ ಕರ್ನಾಟಕ ಭವನದ ಭೂಮಿ ಪೂಜೆ ನೆರವೇರಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋಶಿ ಆಕ್ರೋಶಗೊಂಡಿದ್ದಾರೆ. ಕಾರ್ಯಕ್ರಮದಿಂದ ವಾಪಸ್ ಹೋಗುವುದಾಗಿ ಕಾರು ಹತ್ತಿ ಕುಳಿತರು.
ನನಗೆ ಆಹ್ವಾನ ಕೊಟ್ಟಿಲ್ಲ ಎಂದು ಪ್ರಹ್ಲಾದ್ ಜೋಶಿ ಗಲಾಟೆ ಮಾಡಿದರು. ಈ ವೇಳೆ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಕ್ಷಮೆ ಕೇಳಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಪ್ರಹ್ಲಾದ್ ಜೋಶಿ ಮನವೊಲಿಸಿದರು. ಬಳಿಕ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾದರು.
ಒಟ್ಟಿನಲ್ಲಿ ಕೇಂದ್ರ ಸಚಿವರಿಗೆ ಆಹ್ವಾನ ನೀಡದೇ ಕರ್ನಾಟಕ ಭವನ ಶಿಲಾನ್ಯಾಸ ಆಯೋಜನೆ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
PublicNext
18/09/2020 10:52 am