ನವದೆಹಲಿ: ಉಕ್ರೇನ್‌ನಲ್ಲಿ ತಲೆದೋರಿರುವ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ನಿವಾಸಿಗಳು ತಾವು ನೆಲೆಸಿರುವ ಸ್ಥಳಗಳಲ್ಲಿಯೇ ಶಾಂತಿಯುತವಾಗಿ, ಸುರಕ್ಷಿತವಾಗಿ ತಮ್ಮ ಮನೆ, ಹಾಸ್ಟೆಲ್ ಹಾಗೂ ಪ್ರವಾಸಿಗಳು ವಸತಿ ನಿಲಯಗಳಲ್ಲಿ ತಂಗಬೇಕು ಎಂದು ಉಕ್ರೇನ್‌ನ ಕೀವ್ ನಗರದ ಭಾರತೀಯ ರಾಯಭಾರಿಗಳ ಕಚೇರಿ ಸಲಹೆ ನೀಡಿದೆ.
ಕೀವ್‌ನ ಪಶ್ಚಿಮ ಪ್ರದೇಶಗಳಿಂದ ಪ್ರಯಾಣಿಸುವ ನಾಗರಿಕರು ತಮ್ಮ ನಗರಗಳಲ್ಲಿಯೇ ತಾತ್ಕಾಲಿಕವಾಗಿ ಉಳಿಯಬೇಕು. ವಿಶೇಷವಾಗಿ ದೇಶದ ಪಶ್ಚಿಮ ಗಡಿಗೆ ಹೊಂದಿಕೊಂಡಿರುವವರು ಸುರಕ್ಷಿತ ಸ್ಥಳಗಳಲ್ಲಿರಬೇಕು ಎಂದು ಮನವಿ ಮಾಡಿದೆ.
ಭಾರತೀಯ ವಿದೇಶಾಂಗ ಮಂತ್ರಾಲಯವು ಉಕ್ರೇನ್ ಸಂಬಂಧಿತವಾಗಿ ಸ್ಥಾಪಿಸಿರುವ ಕಂಟ್ರೋಲ್ ರೂಮಿನ ಸಂಖ್ಯೆಗಳು
(Ministry of External Affairs Control Room on Ukraine)
1800118797 (Toll free)
(i) Phones:
+91 11 23012113
+91 11 23014104
+91 11 23017905
(ii) Fax:
+91 11 23088124
(iii) ಇಮೇಲ್ Email:
ಉಕ್ರೇನ್‌ನ ಭಾರತೀಯ ರಾಯಭಾರಿ ಕಚೇರಿಯ 24X7 ಸಹಾಯವಾಣಿ
(Embassy of India in Ukraine 24-hour helpline)
+380 997300428
+380 997300483
ಇಮೇಲ್ (Email:) cons1.kyiv@mea.gov.in
Website:www.eoiukraine.gov.in
PublicNext
24/02/2022 09:07 pm