ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಸಿಯೂಟದಲ್ಲಿ ಮಕ್ಕಳಿಗೆ ಶೇಂಗಾ ಚಿಕ್ಕಿ ವಿತರಣೆ: ಸಚಿವ ನಾಗೇಶ್

ಬೆಂಗಳೂರು: ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿವಾದದ ನಡುವೆ ರಾಜ್ಯ ಸರ್ಕಾರ ಬಿಸಿಯೂಟದೊಂದಿಗೆ ಶೇಂಗಾ ಚಿಕ್ಕಿ ವಿತರಿಸಲು ನಿರ್ಧರಿಸಿದೆ.

ಸದ್ಯಕ್ಕೆ ಶಾಲೆಗಳಲ್ಲಿ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸಲಾಗುವುದು. ವಿದ್ಯಾರ್ಥಿಗಳು ಯಾವುದದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ನಂತರದ ಬೇಡಿಕೆ ಆಧರಿಸಿ ಮಕ್ಕಳಿಗೆ ಇವೆರಡರಲ್ಲಿ ಯಾವುದನ್ನು ನೀಡಬೇಕೆಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಚಿಕ್ಕಿ ವಿತರಣೆ ಬಗ್ಗೆ ಕರ್ನಾಟಕ ಹಾಲು ಒಕ್ಕೂಟದೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಚಿಕ್ಕಿ ವಿತರಣೆಗೂ ಮುನ್ನ ಅದರ ಪೌಷ್ಟಿಕಾಂಶಗಳ ಬಗ್ಗೆ ವಿವಿಧ ಬಗೆಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

14/12/2021 08:23 am

Cinque Terre

84.47 K

Cinque Terre

22

ಸಂಬಂಧಿತ ಸುದ್ದಿ