ಗಾಂಧಿನಗರ: ನರೇಂದ್ರ ಮೋದಿ ಸರಕಾರದ ಬಹುನಿರೀಕ್ಷಿತ ಸೂಪರ್ ಫಾಸ್ಟ್ 2ನೇ ರೈಲು ಇಂದು ಗುಜರಾತ್‌ನ ಗಾಂಧಿನಗರ ರೈಲು ನಿಲ್ದಾಣದಲ್ಲಿ ತನ್ನ ಓಟ ಆರಂಬಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದಾರೆ. ಇದೇ ರೈಲಿನಲ್ಲಿ ಸುಮಾರು ಅರ್ಧ ಗಂಟೆ ಪಯಣಿಸಿದ ಮೋದಿ ನಂತರ ತಮ್ಮ ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ.
ದೇಶದ ಜನತೆಗೆ ಈ ರೈಲು ವಿಶಿಷ್ಟ ಅನುಭವ ನೀಡಲಿದೆ. ಇನ್ಮುಂದೆ ಜನ ವಿಮಾನವನ್ನು ಬಿಟ್ಟು ರೈಲು ಹತ್ತಲಿದ್ದಾರೆ. ನಾನು ಕೂಡ ಈ ರೈಲಿನಲ್ಲಿ ಅರ್ಧ ತಾಸು ಪ್ರಯಾಣ ಮಾಡಿದ್ದೇನೆ. ಇದರಲ್ಲಿನ ಪ್ರಯಾಣ ಅತ್ಯಂತ ನಿಶಬ್ದವಾಗಿರಲಿದೆ. ಮನೆಯಲ್ಲಿ ಮಾತಾಡುವಂತೆ ನೀವು ಈ ರೈಲಿನಲ್ಲಿಯೂ ಸಹ ಪ್ರಯಾಣಿಕರೊಡನೆ ಮಾತಾಡಬಹುದು ಎಂದು ಮೋದಿ ಬಣ್ಣಿಸಿದ್ದಾರೆ.
PublicNext
30/09/2022 11:00 pm