ಚಿಕ್ಕೋಡಿ:ಕರ್ನಾಟಕದಲ್ಲಿ 2024ರ ಬಳಿಕ ಎರಡು ರಾಜ್ಯಗಳಾಗುತ್ತವೆ. ದೇಶದಲ್ಲಿ 50 ರಾಜ್ಯಗಳು ಉದಯಿಸುತ್ತವೆ ಎಂದು ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.ಈಗ ಇದೇ ಹೇಳಿಕೆಯನ್ನ ಉಮೇಶ್ ಕತ್ತಿ ಪುನರುಚ್ಛರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಯಡೂರು ಗ್ರಾಮದಲ್ಲಿ ಮಾಧ್ಯಮದ ಮುಂದೆ ಸಚಿವ ಉಮೇಶ್ ಕತ್ತಿ ಈ ಹೇಳಿಕೆ ನೀಡಿದ್ದಾರೆ. ನನ್ನ ಹೇಳಿಕೆಗೆ ಸಂಬಂಧಿಸಿದಂತೆ ಅವರವರ ಅನಿಸಿಕೆ ಹಂಚಿಕೊಳ್ಳಬಹುದು.ಆದರೆ, ಕೆಲಸವಿಲ್ಲದ ಸಿದ್ದರಾಮಯ್ಯ, ಡಿಕೆಶಿ,ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಇವರೆ ವಿರೋಧ ಮಾಡ್ತಿದ್ದಾರೆ ಎಂದು ಕೂಡ ಟೀಕಿಸಿದರು.
ಈ ದೇಶದಲ್ಲಿ 50 ರಾಜ್ಯಗಳು ನಿರ್ಮಾಣ ಆಗುತ್ತವೆ. ಈ ಸಮಯದಲ್ಲಿಯೇ ಕರ್ನಾಟಕ ಎರಡು ರಾಜ್ಯ ಆಗುತ್ತದೆ.ಮಹಾರಾಷ್ಟ್ರ ಮೂರು ರಾಜ್ಯವಾಗುತ್ತದೆ. ಉತ್ತರ ಪ್ರದೇಶ ನಾಲ್ಕು ರಾಜ್ಯವಾಗಿ ಮಾರ್ಪಡುತ್ತೆ.ವಿಭಜನೆ ಆಗುವುದಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ನಿರ್ಮಾಣ ಮಾಡಲಾಗುತ್ತವೆ ಎಂದು ಉಮೇಶ್ ಕತ್ತಿ ವಿವರಿಸಿದ್ದಾರೆ.
PublicNext
26/06/2022 10:59 pm