ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎತ್ತಿನಹೊಳೆ ಯೋಜನೆ ಕಾಮಗಾರಿ ಶೀಘ್ರದಲ್ಲಿ ಪೂರ್ಣ: ಸಚಿವ ಕಾರಜೋಳ

ಬೆಂಗಳೂರು: ಎತ್ತಿನಹೊಳೆ ಯೋಜನೆಯ ಡಿ.ಜೆ.ಹಳ್ಳಿ ಮತ್ತು ರಾಮನಗರ ಫೀಡರ್ ಮತ್ತು ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಗಳಿಗಾಗಿ ಇಲಾಖಾ ನಿಯಮಾನುಸಾರ/ಟೆಂಡರ್ ಷರತ್ತುಗಳ ಅನ್ವಯ ಕ್ರಮ ಜರುಗಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2013ರ ಭೂಸ್ವಾಧೀನ ಕಾಯಿದೆಯಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹಾಗೂ ಅಡೆತಡೆಗಳನ್ನು ನಿವಾರಿಸಿಕೊಂಡು ಸೆಪ್ಟಂಬರ್-2022ರ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಎಸ್.ಸಿ.ಪಿ./ಟಿ.ಎಸ್.ಪಿ. ಅಡಿಯಲ್ಲಿ ಕೈಗೆತ್ತಿಕೊಂಡಿರುವ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಸಚಿವರು ವಿಧಾನ ಸಭೆಯಲ್ಲಿ ನೆಲಮಂಗಲ ಶಾಸಕ ಡಾ|| ಶ್ರೀನಿವಾಸಮೂರ್ತಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, 2018-19ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿ 86 ಕಾಮಗಾರಿಗಳಿಗೆ 2320 ಮತ್ತು ಟಿ.ಎಸ್.ಪಿ ಯೋಜನೆಯಡಿ 43 ಕಾಮಗಾರಿಗಳಿಗೆ 720 ಕೋಟಿ 2019-20ರಲ್ಲಿ ಎಸ್.ಸಿ.ಪಿ. ಯೋಜನೆಯಡಿ 59 ಕಾಮಗಾರಿಗಳಿಗೆ 1870 ಮತ್ತು ಟಿ.ಎಸ್.ಪಿ. ಯೋಜನೆಯಡಿ 34 ಕಾಮಗಾರಿಗಳಿಗೆ 780 ಕೋಟಿ ಅನುದಾನ ನೀಡಲಾಗಿರುತ್ತದೆ ಎಂದು ಸಚಿವ ಗೋವಿಂದ್ ಕಾರಜೋಳ ಉತ್ತರಿಸಿದ್ದಾರೆ.

Edited By : Nagaraj Tulugeri
PublicNext

PublicNext

08/03/2022 03:28 pm

Cinque Terre

45.12 K

Cinque Terre

1

ಸಂಬಂಧಿತ ಸುದ್ದಿ