ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಪರಿಣಾಮ ಸಾರಿಗೆ ನಿಗಮಗಳಿಗೆ 2,900 ಕೋಟಿ ರೂ. ನಷ್ಟ: ಸಚಿವ ಕಾರಜೋಳ

ಬೆಂಗಳೂರು: ಕೆರೊನಾ ಗಂಡಾಂತರ ಕಾರಣದಿಂದ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಸಾರಿಗೆ ನಿಗಮಗಳಿಗೆ 2,900 ಕೋಟಿ ರೂ. ನಷ್ಟವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಕಳೆದ ಮೂರು ವರ್ಷದಲ್ಲಿ ನಾಲ್ಕು ನಿಮಗಳಲ್ಲಿ 2,900 ಕೋಟಿ ನಷ್ಟವಾಗಿದ್ದು, ನಷ್ಟ ಕಡಿಮೆಮಾಡಲು ಬಸ್ ನಿಲ್ದಾಣದಲ್ಲಿನ ಮಳಿಗೆಗಳನ್ನು ಬಾಡಿಗೆ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಸಾರಿಗೆ ನಿಗಮಗಳಿಗೆ ಈವರೆಗೆ 2900 ಕೋಟಿ ರೂ. ನಷ್ಟವಾಗಿದ್ದು, ಇದಕ್ಕೆ ಮೂರು ಕಾರಣಗಳಿವೆ. 2015 ರಿಂದ ಬಸ್ ದರ ಪರಿಷ್ಕರಣೆ ಮಾಡಿಲ್ಲ. ಡೀಸೆಲ್ ದರ ಹೆಚ್ಚಳವಾಗಿರುವುದು ಮತ್ತು ಕೋವಿಡ್ ನಿಂದಾಗಿ ಆರು ತಿಂಗಳ ಕಾಲ ಬಸ್ ಗಳು ಬಂದ್ ಆಗಿದ್ದವು ಎಂದು ಮಾಹಿತಿ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

17/02/2022 07:20 am

Cinque Terre

124.14 K

Cinque Terre

7

ಸಂಬಂಧಿತ ಸುದ್ದಿ