ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ಸಂಕಷ್ಟ;ಜಿಲ್ಲಾ ಉಸ್ತುವಾರಿ ಸಚಿವರ ಸಂಧಾನ ವಿಫಲ

ದೊಡ್ಡಬಳ್ಳಾಪುರ: ಬಿಬಿಎಂಪಿ  ಕಸದ ವಿರುದ್ಧ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಪ್ರತಿಭಟನೆ ಸ್ಥಳಕ್ಕೆ  ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ  ನಾಗರಾಜ್  ಭೇಟಿ ನೀಡಿದರು.

ಸಚಿವರ ಜೊತೆ ಬಿಬಿಎಂಪಿ  ಮುಖ್ಯ ಆಯುಕ್ತ  ಗೌರವ್ ಗುಪ್ತ, ಕೇಂದ್ರ  ವಲಯ ಐಜಿಪಿ ಚಂದ್ರಶೇಖರ್, ಬೆಂಗಳೂರು  ಗ್ರಾಮಾಂತರ  ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಹಿತ ಅಧಿಕಾರಿಗಳ ತಂಡವೇ ಇತ್ತು. 

ಸಚಿವರಿಗೆ  ಕಸದಿಂದ ತಾವು ಅನುಭವಿಸುತ್ತಿರುವ ನೋವನ್ನು  ಗ್ರಾಮಸ್ಥರು ತೋಡಿಕೊಂಡು, ಎಂಎಸ್ ಜಿಪಿ ಘಟಕವನ್ನು  ಶಾಶ್ವತವಾಗಿ  ಮುಚ್ಚುವಂತೆ ಬೇಡಿಕೆ  ಇಟ್ಟರು  ಮತ್ತು 4 ಪಂಚಾಯಿತಿಯ 60 ಹೆಚ್ಚು ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯನ್ನೂ  ನೀಡಿದರು.

ಈ ಸಂದರ್ಭ ಮಾತನಾಡಿದ  ಸಚಿವ ಎಂಟಿಬಿ, ಅಧಿಕಾರಿಗಳ ತಂಡ  ಎಂಎಸ್ ಜಿಪಿ ಘಟಕಕ್ಕೆ ಭೇಟಿ ನೀಡಿದ್ದು, ಘಟಕದ ವೈಫಲ್ಯ ಮನಗಂಡಿದ್ದಾರೆ. ಅದರ ವಿರುದ್ಧ ಕಾನೂನು  ಕ್ರಮ ತೆಗೆದುಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಕಸ ಎತ್ತದಿದ್ದರೆ ಅಲ್ಲಿನ ಜನ ಪ್ರತಿಭಟನೆ  ಮಾಡುತ್ತಾರೆ. ಇಲ್ಲಿ ಕಸ ಸುರಿಯಬಾರದೆಂದು ಇವರು  ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ, ಧರಣಿಯೇ ಪ್ರತಿಯೊಂದಕ್ಕೂ ಪರಿಹಾರವಲ್ಲ. ಎಂಎಸ್ ಜಿಪಿ ಘಟಕ  ಶಾಶ್ವತವಾಗಿ  ಮುಚ್ಚುವಂತೆ ಲಿಖಿತ ಭರವಸೆಗಾಗಿ  ಧರಣಿನಿರತರು ಬೇಡಿಕೆ  ಇಟ್ಟಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಗಮನಕ್ಕೆ  ತಂದು ಲಿಖಿತ ಭರವಸೆ ನೀಡುವ ಬಗ್ಗೆ  ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.

ಧರಣಿನಿರತರೊಂದಿಗೆ ಸಚಿವರು ನಡೆಸಿದ ಸಂಧಾನ ಸಭೆ ವಿಫಲಗೊಂಡಿದ್ದು, ಎಂಎಸ್  ಜೆಪಿ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Edited By : Manjunath H D
PublicNext

PublicNext

01/12/2021 08:08 am

Cinque Terre

49.06 K

Cinque Terre

0

ಸಂಬಂಧಿತ ಸುದ್ದಿ