ನಿರಂತರ ಸುರಿಯುತ್ತಿರುವ ಮಳೆಗೆ ರಸ್ತೆಗಳು ಹಾಳಾಗಿರುವುದರಿಂದ ಬೈಲಹೊಂಗಲ ತಾಲೂಕಾಡಳಿತ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ನಿವಾಸಿಗಳೆಲ್ಲ ಸೇರಿ ಬೈಲಹೊಂಗಲ-ಧಾರವಾಡ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬೈಲಹೊಂಗಲದ ಪುರಸಭೆಯ 27 ವಾರ್ಡ್‌ಗಳಲ್ಲಿ ಕಳಪೆ ಕಾಮಗಾರಿಯಿಂದ ಮಳೆಗೆ ರಸ್ತೆಗಳು ಹಾಳಾಗಿವೆ. ಯಾರೂ ಕೂಡ ಸರಿಯಾದ ಸಮಯಕ್ಕೆ ಸ್ಪಂದಿಸುತ್ತಿಲ್ಲ. ಮೂಲಭೂತ ಸಮಸ್ಯೆಗಳನ್ನು ಸರಿಯಾಗಿ ಒದಗಿಸುತ್ತಿಲ್ಲ ಎಂದು ಶಾಸಕ ಮಹಾಂತೇಶ ಕೌಜಲಗಿ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮೇಲೆ ಕುಳಿತು ಸ್ಥಳೀಯ ಮಹಿಳೆಯರು, ನಾಗರಿಕರು ರಸ್ತೆ ತಡೆ ನಡೆಸಿದರ ಪರಿಣಾಮ ಟ್ರಾಫಿಕ್ ಸಮಸ್ಯೆಯಾಗಿ, ಸಾಲುಗಟ್ಟಿ ಬಸ್ ಹಾಗೂ ವಾಹನಗಳು ನಿಂತವು.
PublicNext
19/07/2022 06:51 pm