ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಜರಾತ್‌ನಲ್ಲಿ ಜೆಸಿಬಿ ಕೈಗಾರಿಕೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಭೇಟಿ

ಅಹಮದಾಬಾದ್: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಗುಜರಾತ್‌ಗೆ ಬಂದಿಳಿದಿದ್ದಾರೆ. ದೇಶಕ್ಕೆ ಆಗಮಿಸಿದವರೇ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿ, ನಂತರ ಕೈಗಾರಿಕೋದ್ಯಮಿ, ಏಷ್ಯಾದ ಸಿರಿವಂತ ಗೌತಮ್ ಅದಾನಿ ಅವರ ಆತಿಥ್ಯ ಸ್ವೀಕರಿಸಿದ್ದಾರೆ.

ಅಹಮದಾಬಾದ್ ನಗರದ ಹೊರವಲಯ ಶಾಂತಿಗ್ರಾಮದಲ್ಲಿರುವ ಅದಾನಿ ಗ್ರೂಪ್‌ನ ಜಾಗತಿಕ ಪ್ರಧಾನ ಕಛೇರಿಯಲ್ಲಿ ಬೋರಿಸ್‌ ಜಾನ್ಸನ್‌ ಅವರನ್ನು ಗೌತಮ್‌ ಅದಾನಿ ಬರಮಾಡಿಕೊಂಡರು. ನಂತರ ಇಬ್ಬರೂ ಒಂದಿಷ್ಟು ಕಾಲ ಸಭೆಯನ್ನೂ ನಡೆಸಿದರು.

ಬಳಿಕ ಅವರು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ಬೋರಿಸ್ ಅವರು ಪಂಚಮಹಲ್‌ನ ಹಲೋಲ್‌ನಲ್ಲಿರುವ ಜೆಸಿಬಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದಾರೆ. ಹಾಗೂ ಅಲ್ಲಿನ ಜೆಸಿಬಿಗಳ ಮೇಲೆ ಹತ್ತಿದ ಬೋರಿಸ್ ಕಾರ್ಯಕ್ಷಮತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

21/04/2022 07:21 pm

Cinque Terre

202.45 K

Cinque Terre

7

ಸಂಬಂಧಿತ ಸುದ್ದಿ