ಕರ್ನಾಲ್: ರಾಷ್ಟ್ರ ಧ್ವಜ ಖರೀದಿಸದಿದ್ದರೆ ಪಡಿತರ ಧಾನ್ಯ ನೀಡೋದಿಲ್ಲ ಎಂದು ಪರೋಕ್ಷವಾಗಿ ಪಡಿತರ ಅಂಗಡಿಯ ಮಾಲೀಕ ಧಮ್ಕಿ ಹಾಕಿದ್ದಾನೆ. ಈ ಘಟನೆ ಹರಿಯಾಣದ ಕರ್ನಾಲ್ ಜಿಲ್ಲೆಯ ಹೆಮ್ಡ ಪ್ರದೇಶದ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿದೆ.
ರೇಶನ್ ಬೇಕು ಎಂದರೆ ಎಲ್ಲರೂ 20 ರೂ. ಕೊಟ್ಟು ರಾಷ್ಟ್ರಧ್ವಜ ಖರೀದಿಸಲೇಬೇಕು. ಇಲ್ಲವಾದಲ್ಲಿ ರೇಶನ್ ನೀಡಲು ಸಾಧ್ಯವಿಲ್ಲ ಎಂದು ಪಡಿತರ ಅಂಗಡಿ ಮಾಲೀಕ ತಾಕೀತು ಮಾಡಿದ್ದಾನೆ. ಈ ಬಗ್ಗೆ ಪಡಿತರ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ ದೇಶಪ್ರೇಮ ಇದೆ. ಆದ್ರೆ ನೀವು ಬಲವಂತದ ದೇಶಪ್ರೇಮವನ್ನು ನಮ್ಮ ಮೇಲೆ ಹೇರುತ್ತಿದ್ದೀರಿ ಎಂಬುದು ಪಡಿತರ ಫಲಾನುಭವಿಗಳ ವಾದವಾಗಿತ್ತು.
ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ, 'ಅಮೃತ ಮಹೋತ್ಸವ ಸಂಭ್ರಮವು ಬಡವರಿಗೆ ಹೊರೆಯಾದರೆ ಅದು ದುರದೃಷ್ಟಕರ' ಎಂದಿದ್ದಾರೆ.
PublicNext
12/08/2022 09:16 am