ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಸ್ಟಾಡೋಮ್ ನೊಂದಿಗಿನ ರೈಲು ಸಂಚಾರದ ಘೋಷಣೆಯ ಸುದ್ದಿ ಸುಳ್ಳು, ಅಧಿಕೃತವಲ್ಲದ ಈ ಸುದ್ದಿಯನ್ನು ಹರಡಿ ಜನತೆಯನ್ನು ದಾರಿತಪ್ಪಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ (ಎಸ್ ಡಬ್ಲ್ಯುಆರ್) ಅಧಿಕಾರಿಗಳು ಹೇಳಿದ್ಧಾರೆ.
ಹೌದು ಹುಬ್ಬಳ್ಳಿ-ವಾಸ್ಕೋ ಡ ಗಾಮ ರೈಲು ವಿಸ್ಟಾಡೋಮ್ ಕೋಚ್ ನೊಂದಿಗೆ ಜು.16 ರಿಂದ ಕಾರ್ಯನಿರ್ವಹಿಸಲಿದೆ ಎಂಬ ಸುಳ್ಳು ಸುದ್ದಿ ವೈರಲ್ ಆಗಿತ್ತು.ವಿಪರ್ಯಾಸ ಎಂದರೆ ಈ ಸುಳ್ಳು ಸುದ್ದಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಅಚ್ಚರಿಗೊಳಿಸಿದೆ.
ಟ್ವಿಟರ್ ಖಾತೆಯ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದ ಪ್ರಹ್ಲಾದ್ ಜೋಷಿ ಹುಬ್ಬಳ್ಳಿ-ವಾಸ್ಕೋ ಡ ಗಾಮ ರೈಲು ಸಂಚರಿಸುವ ಮಾರ್ಗದ ಪ್ರಯಾಣಿಕರು ವಿಸ್ಟಾಡೋಮ್ ಕೋಚ್ ಮೂಲಕ ಪ್ರಕೃತಿಯ ಸೌಂದರ್ಯವನ್ನು ಆನಂದಿಸಬಹುದು ಎಂದು ಹೇಳಿದ್ದರು. ಅವರ ಟ್ವೀಟ್ ಗಳನ್ನು ಹಲವು ಮಂದಿ ಹಂಚಿಕೊಂಡಿದರು. ಆದರೆ ಇದು ನಕಲಿ, ಸುಳ್ಳು ಸುದ್ದಿ ಎಂದು ತಿಳಿದ ತಕ್ಷಣವೇ ಜೋಶಿ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಅನಾಮಿಕ ದುಷ್ಕರ್ಮಿಗಳು ವಿಸ್ಟಾಡೋಮ್ ಬಗ್ಗೆ ಎಸ್ ಡಬ್ಲ್ಯುಆರ್ ಪತ್ರಿಕಾ ಹೇಳಿಕೆಯ ರೀತಿ ನಕಲಿ ಪತ್ರಿಕಾ ಹೇಳಿಕೆ ನೀಡಿರುವುದೇ ಈ ಗೊಂದಲ್ಲಕ್ಕೆ ಕರಾಣವಾಗಿದ್ದು ರೈಲ್ವೆ ಇಲಾಖೆ ಇದಕ್ಕೇಲ್ಲಾ ತೆರೆ ಎಳೆದಿದೆ.
PublicNext
15/07/2022 04:07 pm