ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿನಲ್ಲಿ ಪ್ರಧಾನಿ ಹಾಗೂ ರಾಮದಾಸ್ ನಡುವೆ ಅಷ್ಟೊಂದು ಆಪ್ತತೆಗೆ ಕಾರಣವೇನು?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಾಗ ಮಾಜಿ ಸಚಿವ ಎಸ್.ಎ ರಾಮದಾಸ್ ಅವರ ಮೇಲೆ ಹೆಚ್ಚು ಆಪ್ತತೆ ತೋರಿದ್ದರು. ಸುಮಾರು ಸಲ ತೆರೆದ ವೇದಿಕೆಯಲ್ಲೇ ಬೆನ್ನು ತಟ್ಟಿದ್ದ ಮೋದಿ ರಾಮದಾಸ್‌ಗೆ ಒಂದೆರಡು ಕಿವಿಮಾತು ಹೇಳಿದ್ದರು. ಈ ಸಂದರ್ಭದ ಕೆಲವು ದೃಶ್ಯಗಳು ವೈರಲ್ ಆಗಿದ್ದವು. ಎಲ್ಲರನ್ನೂ ಬಿಟ್ಟು ರಾಮದಾಸ್‌ ಅವರ ಮೇಲೆ ಮೋದಿ ಇಷ್ಟೇಕೆ ಕಾಳಜಿ, ಪ್ರೀತಿ ತೋರುತ್ತಿದ್ದಾರೆ? ಎಂಬ ಪ್ರಶ್ನೆ ಮೈಸೂರಿನ ಜನರದ್ದಾಗಿತ್ತು. ಇದಕ್ಕೆ ಕೆಲವು ಉತ್ತರಗಳು ಸಿಕ್ಕಿವೆ.

ಮಾಜಿ ಸಚಿವ ಎಸ್.ಎ ರಾಮದಾಸ್ ಅವರ ತಂದೆ ಅಶ್ವತ್ಥ್ ನಾರಾಯಣರಾವ್ ಮತ್ತು ಅವರ ತಾಯಿ ಸರೋಜಮ್ಮ ಅವರು ಮೊದಲಿನಿಂದಲೂ ಮೋದಿ ಕುಟುಂಬಕ್ಕೆ ಪರಮಾಪ್ತರು. ಎಸ್‌.ಎ ರಾಮದಾಸ್ ಅವರು 2010 ರಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕುಟುಂಬ ಮೈಸೂರು ದಸರಾ ವೀಕ್ಷಣೆಗೆ ಬಂದಿತ್ತು.

ಮೈಸೂರು ಜಿಲ್ಲಾ ಉಸ್ತುವಾರಿಯಾಗಿದ್ದ ಎಸ್.ಎ ರಾಮದಾಸ್ ಅವರ ಮನೆಯಲ್ಲಿಯೇ ಮೋದಿ ಎರಡು ದಿನ ಉಳಿದುಕೊಂಡಿದ್ದರಂತೆ. ಮಾತ್ರವಲ್ಲ ಸ್ವತಃ ರಾಮದಾಸ್ ಅವರ ಕಾರನ್ನೇ ಬಳಸಿ ಎರಡು ದಿನ ನರೇಂದ್ರ ಮೋದಿ ಮೈಸೂರು ಸುತ್ತಾಡಿದ್ದರು. ಮೋದಿ ಅವರ ಎರಡು ದಿನದ ಅತಿಥ್ಯ ವಹಿಸಿದ್ದ ರಾಮದಾಸ್ ಅವರ ತಾಯಿ ಸರೋಜಮ್ಮ ಸ್ವತಃ ಕೈ ಅಡುಗೆ ಮಾಡಿ ಬಡಿಸಿದ್ದರು. ರಾಮದಾಸ್ ಅವರ ತಾಯಿ ಅಡುಗೆ ಅಂದರೆ ಪ್ರಧಾನಿ ಮೋದಿಗೆ ತುಂಬಾ ಇಷ್ಟ. ಹೀಗೆ ಆರಂಭವಾದ ಸಂಬಂಧ ಇಂದಿಗೂ ಅದೇ ರೀತಿ ಮುಂದುವರೆದಿದೆ.

ರಾಮದಾಸ್ ಕುಟುಂಬ ಒಮ್ಮೆ ಗುಜರಾತ್ ಪ್ರವಾಸಕ್ಕೆ ಹೋದಾಗ ಮೋದಿ ಮನೆಯಲ್ಲಿಯೇ ದೀಪಾವಳಿ ಆವರಿಸಿದ್ದರು. ರಾಮದಾಸ್ ಅವರ ತಾಯಿಯನ್ನು ಎರಡು ದಿನ ಗುಜರಾತ್ ಪ್ರವಾಸಕ್ಕೆ ಕಳುಹಿಸಿ ರಾಜ್ಯ ಹೇಗಿದೆ ಹೇಳಿ ಎಂದು ಸೂಚಿಸಿದ್ದರಂತೆ. ಆ ಪ್ರಕಾರ ಎರಡು ದಿನ ಗುಜರಾತ್ ಪ್ರವಾಸಕ್ಕೆ ರಾಮದಾಸ್ ತಮ್ಮ ತಾಯಿಯೊಂದಿಗೆ ತೆರಳಿ ವಾಪಸ್ ಬಂದು ನಾನು ರಾಮರಾಜ್ಯವನ್ನು ನೋಡಿದೆ ಎಂದು ಹೇಳಿದ್ದಾರೆ. ಆಗ ಮೋದಿ ಪುಳಕಿತರಾಗಿದ್ದರಂತೆ. ಈ ಎಲ್ಲ ಕಾರಣಗಳಿಂದ ರಾಮದಾಸ್ ಕುಟುಂಬ ಹಾಗೂ ಮೋದಿ ಕುಟುಂಬದ ನಡುವೆ ದಶಕದ ಬಾಂಧವ್ಯ ಬೆಸೆದುಕೊಂಡು ಬಂದಿದೆ.

Edited By : Nagaraj Tulugeri
PublicNext

PublicNext

21/06/2022 08:21 pm

Cinque Terre

73.23 K

Cinque Terre

10