ಬೆಳಗಾವಿ: ಉಮೇಶ ಕತ್ತಿ ಅವರ ನಿಧನ ಕರ್ನಾಟಕ ರಾಜ್ಯಕ್ಕೆ ದೊಡ್ಡ ನಷ್ಟ ಎಂದು ಉಮೇಶ ಕತ್ತಿ ಮತ್ತು ಅವರ ನಡುವಿನ ಒಡನಾಟ ನೆನಪನ್ನು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೆಲುಕು ಹಾಕಿದ್ರು. ಬೆಳಗಾವಿಯಲ್ಲಿ ಸಾಂಬ್ರಾ ಏರ್‌ಫೋರ್ಟ್ ನಲ್ಲಿ ಮಾತಾಡಿದ ಅವರು ಬೆಳಗಾವಿ, ಬೆಂಗಳೂರಲ್ಲಿ ಸಿಕ್ಕಾಗ ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ಬಿಜೆಪಿ ಹೇಗೆ ಗಟ್ಟಿ ಮಾಡಬೇಕು ಎಂಬ ಬಗ್ಗೆ ಹೇಳುತ್ತಿದ್ರು ಎಂದು ಅವರ ಪಕ್ಷ ನಿಷ್ಠೆಯ ಬಗ್ಗೆ ಮಾತಾಡಿದರು.
ನಾನು ಈಗ ಅವರ ಗ್ರಾಮಕ್ಕೆ ಹೋಗುತ್ತಿದ್ದೇನೆ ಅವರ ಸಮಾಧಿ ದರ್ಶನ ಪಡೆಯಲು ಹೋಗುತ್ತಿದ್ದೇನೆ. ಉಮೇಶ್ ಕತ್ತಿ ಏಕಾಏಕಿ ನಮ್ಮನ್ನು ಅಗಲಿದ್ದಾರೆ ಇದು ನಮಗೆ ನೋವು ತಂದಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಉಮೇಶ್ ಕತ್ತಿ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ನೀಡಲಿ. ಎಂದು ಸಾಂತ್ವನ ಹೇಳಿದರು.
PublicNext
08/09/2022 03:37 pm